Urdu   /   English   /   Nawayathi

ನವೆಂಬರ್ ತಿಂಗಳಲ್ಲಿ ದಾಖಲೆಯ GST ಸಂಗ್ರಹ..! ಹಳಿಗೆ ಬಂತಾ ಆರ್ಥಿಕತೆ..?

share with us

ನವದೆಹಲಿ: 01 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಂಗ್ರಹಕ್ಕೆ ಸಂಬಂಧಿಸಿದ ನವೆಂಬರ್ ಮಾಸಿಕದ ವರದಿ ಹೊರಬಿದ್ದಿದೆ. ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯಂತೆ ನವೆಂಬರ್ ತಿಂಗಳಲ್ಲಿ 1,03,492 ಕೋಟಿ ಜಿಎಸ್​ಟಿ ಸಂಗ್ರಹವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಏರಿಕೆ ಕಂಡಿದೆ.

ನವೆಂಬರ್​ ತಿಂಗಳ ಸಂಗ್ರಹಣೆ ಜಿಎಸ್​ಟಿ ಜಾರಿಗೊಂಡ ಬಳಿಕದ ಮೂರನೇ ಅತಿದೊಡ್ಡ ಸಂಗ್ರಹವಾಗಿದೆ. ಇದೇ ವರ್ಷದ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಲ್ಲೂ ಜಿಎಸ್​ಟಿ ಸಂಗ್ರಹ 1ಲಕ್ಷ ಕೋಟಿಯ ಗಡಿ ದಾಟಿತ್ತು. ಆಗಸ್ಟ್, ಸೆಪ್ಟೆಂಬರ್​​ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು. ಜಿಎಸ್​ಟಿ ಸಂಗ್ರಹದ ಹೆಚ್ಚಳ ಹಾಗೂ ಆರ್ಥಿಕತೆ ವೃದ್ಧಿಗೆ ಕಳೆದ ಕೆಲ ತಿಂಗಳಿನಿಂದ ಹಣಕಾಸು ಸಚಿವಾಲಯ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ​

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا