Urdu   /   English   /   Nawayathi

ಉಗ್ರರ ತವರೂರು ಪಾಕ್‍ಗೆ ಬಿಸಿ ಮುಟ್ಟಿಸಿದ ಭಾರತ ಮತ್ತು ಜಪಾನ್..!

share with us

ನವದೆಹಲಿ: 01 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರಗಾಮಿಗಳಿಗೆ ಸುರಕ್ಷಿತ ಆಶ್ರಯ ತಾಣ ಒದಗಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತು ಜಪಾನ್ ಬಿಸಿ ಮುಟ್ಟಿಸಿವೆ. ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಗ್ರ ಜಾಲದಿಂದ ಪ್ರಾದೇಶಿಕ ಶಾಂತಿಗೆ ಭಂಗ ಉಂಟಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಹಾಗೂ ಜಪಾನ್ ರಾಷ್ಟ್ರಗಳು ಒತ್ತಾಯಿಸಿವೆ. ಭಾರತ ಹಾಗೂ ಜಪಾನ್ ರಾಷ್ಟ್ರಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಾತುಕತೆಯಲ್ಲಿ ಜಾಗತಿಕ ಭಯೋತ್ಪಾದನಾ-ವಿರೋಧಿ ಕಾವಲುಗಾರನಾದ ಫೈನಾನ್ಷಿಯಲ್ ಆಕ್ಷನ್ ಟಾಫೋರ್ಸ್ (ಎಫ್‍ಎಟಿಎಫ್) ಸೂಚಿಸಿರುವ ಕ್ರಮಗಳನ್ನು ಒಳಗೊಂಡಂತೆ ಭಯೋತ್ಪಾದನೆ ಎದುರಿಸಲು ತನ್ನ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಉಭಯ ದೇಶಗಳು ಸ್ಪಷ್ಟವಾಗಿ ಕರೆ ನೀಡಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಜೈ. ಶಂಕರ್ ನೇತೃತ್ವದ ಭಾರತದ ನಿಯೋಗದಲ್ಲಿದ್ದರೆ, ಜಪಾನ್ ಪರ ವಿದೇಶಾಂಗ ಸಚಿವ ತೋಷಿಮಿಟ್ಸು ಮೊಟೆಗಿ ಮತ್ತು ರಕ್ಷಣಾ ಸಚಿವ ತಾರೊ ಕೊನೊ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ಬೇರೂರಿಸುವಲ್ಲಿ, ಭಯೋತ್ಪಾದಕ ಜಾಲಗಳನ್ನು ಅಡ್ಡಿಪಡಿಸುವ, ಹಣಕಾಸು ಮಾರ್ಗಗಳನ್ನು ನಿರ್ಮೂಲನೆ ಮಾಡುವ ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಆಂದೋಲನವನ್ನು ತಡೆಯುವಲ್ಲಿ ಭಾರತ ಮತ್ತು ಜಪಾನ್ ಎಲ್ಲಾ ದೇಶಗಳಿಗೆ ದೃಢ ನಿರ್ಧಾರ ಕೈಗೊಳ್ಳಬೇಕೆಂದು ಕರೆ ನೀಡಿವೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا