Urdu   /   English   /   Nawayathi

ವಿಚಿತ್ರ ಅನಿಸಿದರೂ ಇದು ಸತ್ಯ: ಹಣ ಬಿಟ್ಟು ಕಳ್ಳರು ಕದ್ದೊಯ್ದಿದ್ದೇನು?

share with us

ಪಶ್ಚಿಮ ಬಂಗಾಳ: 28 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಎಲ್ಲಿಯಾದರೂ ಕಳ್ಳತನ ನಡೆದರೆ, ನಗದು, ಚಿನ್ನಾಭರಣ ದೋಚಿ ವಸ್ತುಗಳನ್ನು ಬಿಟ್ಟು ಹೋಗುತ್ತಾರೆ. ಆದರೆ, ಇಲ್ಲಿ ಅದಕ್ಕೆ ವಿರುದ್ಧವಾಗಿ ಜರುಗಿದೆ. ಹೌದು, ಇಲ್ಲಿನ ತರಕಾರಿ ಮಳಿಗೆಗೆ ನುಗ್ಗಿದ ಕಳ್ಳರು, ಹಣವನ್ನು ಅಲ್ಲಿಯೇ ಬಿಟ್ಟು ಈರುಳ್ಳಿ ಮೂಟೆಗಳನ್ನು ಹೊತ್ತೊಯ್ದಿದ್ದಾರೆ. ಈರುಳ್ಳಿಗೆ ಬಂಗಾರದ ಬೇಡಿಕೆ ಬಂದಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇಂತದೊಂದು ಘಟನೆ ರಾಜ್ಯದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಸುತಹತ ನಗರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಕೆ.ಜಿ ಈರುಳ್ಳಿ ದರ 100ರ ಗಡಿ ದಾಟಿದೆ. ಆದ್ದರಿಂದ ಇಲ್ಲಿ ಈರುಳ್ಳಿ ಭಾರೀ ಬೇಡಿಕೆ ಇದೆ. ಅಕ್ಷಯ್​ ದಾಸ್​ ಎಂಬವರಿಗೆ ಸೇರಿದ ಮಳಿಗೆಯಲ್ಲಿ ಮೂರು ಮೂಟೆ ಈರುಳ್ಳಿಯಲ್ಲಿ ಕದ್ದೊಯ್ದಿದ್ದಾನೆ. ಅಕ್ಷಯ್​ ನವೆಂಬರ್​ 25 ರಂದು ತನ್ನ ತರಕಾರಿ ಮಳಿಗೆಯನ್ನು ರಾತ್ರಿ ಮುಚ್ಚಿಕೊಂಡು ಮನೆ ಹೋಗಿದ್ದ. ಅಕ್ಷಯ್​ ಹೋಗುವುದನ್ನೇ ನೋಡಿಕೊಂಡಿದ್ದ ಕಳ್ಳರು, ಬೀಗ ಮುರಿದು ಈರುಳ್ಳಿ ಜೊತೆಗೆ, ಒಂದು ಕ್ವಿಂಟಾಲ್​ ಶುಂಠಿ, 90 ಕೆ.ಜಿ. ಬೆಳ್ಳುಳ್ಳಿ ಹಾಗೂ ಆಲೂಗೆಡ್ಡೆಯನ್ನು ದೋಚಿದ್ದಾರೆ. ಬೆಳಗ್ಗೆ ಅಂಗಡಿಗೆ ಬಂದ ಅಕ್ಷಯ್​ ಬೀಗ ಒಡೆದಿರುವುದು ಕಂಡು ಗಾಬರಿಗೊಳಗಾದ. ಅಲ್ಲದೇ, ಒಳಹೊಕ್ಕಿ ನೋಡಿದಾಗ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮಾಯವಾಗಿತ್ತು. ಅಯ್ಯೋ ರಾಮ ಈರುಳ್ಳಿಗೆ ಬೇಡಿಕೆ ಇತ್ತು ಎಂಬುದು ಗೊತ್ತಿತ್ತು. ಆದರೆ, ಇಷ್ಟರ ಮಟ್ಟಿಗೆ ಇದೆ ಎಂದು ಗೊತ್ತಿರಲಿಲ್ಲ ಎಂದು ಅಕ್ಷಯ್​ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا