Urdu   /   English   /   Nawayathi

ಕೌಟುಂಬಿಕ ಪ್ರಾಯೋಜಿತ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿ 2.27 ಲಕ್ಷ ಭಾರತೀಯರು

share with us

ವಾಷಿಂಗ್ಟನ್: 28 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕೌಟುಂಬಿಕ ಪ್ರಾಯೋಜಿತ ಗ್ರೀನ್ ಕಾರ್ಡ್ ಅಥವಾ ಕಾನೂನುಬದ್ಧ ಶಾಶ್ವತ ಪೌರತ್ವಕ್ಕಾಗೀ 2,27,99ಕ್ಕೂ ಹೆಚ್ಚು ಭಾರತೀಯರು ನಿರೀಕ್ಷೆಯಲ್ಲಿದ್ದಾರೆ ಎಂದು ಇತ್ತೀಚಿನ ಅಧಿಕೃತ ದತ್ತಾಂಶ ಮಾಹಿತಿ ತಿಳಿಸಿದೆ. ಅಮೆರಿಕ ಸರ್ಕಾರ ವರ್ಷಕ್ಕೆ 2.26,000 ಗ್ರೀನ್‍ಕಾರ್ಡ್‍ಗಳಿಗೆ ಅನುಮತಿ ನೀಡಿದ್ದು, ಭಾರತದ 2.27 ಲಕ್ಷ ಮಂದಿ ಸೇರಿದಂತೆ ಒಟ್ಟು ನಲ್ವತ್ತು ಲಕ್ಷ ಜನರು ಕಾನೂನುಬದ್ಧ ಕಾಯಂ ನಾಗರಿತ್ವಕ್ಕಾಗಿ ಕಾಯುತ್ತಿದ್ದಾರೆ. ಅಮೆರಿಕದ ನೆರೆ ರಾಷ್ಟ್ರ ಮೆಕ್ಸಿಕೋದಿಂದ 15 ಲಕ್ಷ ಮಂದಿ ಗ್ರೀನ್‍ಕಾರ್ಡ್‍ಗಾಗಿ ಕಾಯುತ್ತಿದ್ದು, ಭಾರತದಿಂದ 2,27,000 ಹಾಗೂ ಚೀನಾದಿಂದ 1,80,000 ಜನರು ಶಾಶ್ವತ ಪೌರತ್ವ ನಿರೀಕ್ಷೆಯಲ್ಲಿದ್ದಾರೆ. ಕೌಟುಂಬಿಕ ಪ್ರಾಯೋಜಿತ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿರುವವರಲ್ಲಿ ಬಹುತೇಕ ಮಂದಿ ಅಮೆರಿಕ ಪೌರತ್ವ ಪಡೆದವರ ಸಹೋದರ ಸಹೋದರಿಯೇ ಆಗಿದ್ದಾರೆ. ಪ್ರಸ್ತುತ ಕಾನೂನು ಅಡಿ, ಅಮೆರಿಕ ನಾಗರಿಕರು ಗ್ರೀನ್ ಕಾರ್ಡ್‍ಗಾಗಿ ಅಥವಾ ಶಾಶ್ವತ ಕಾನೂನುಬದ್ಧ ನೆಲೆಸುವಿಕೆಗಾಗಿ ತಮ್ಮ ಕುಟುಂಬದ ಸದಸ್ಯರು ಮತ್ತು ರಕ್ತಸಂಬಂಧಿಗಳಿಗೆ ಮಾತ್ರ ಪ್ರಾಯೋಜಕತ್ವ ನೀಡಬಹುದು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا