Urdu   /   English   /   Nawayathi

ಶ್ವೇತಭವನದೊಳಗೆ ಬಂದ ಅನುಮಾನಾಸ್ಪದ ವಿಮಾನ: ಅರ್ಧಗಂಟೆ ವೈಟ್​ಹೌಸ್​ ಲಾಕ್​​ಡೌನ್​

share with us

ವಾಷಿಂಗ್ಟನ್: 27 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಮೆರಿಕದ ಶ್ವೇತ ಭವನದ ಸುತ್ತಮುತ್ತ ಜಾರಿಗೊಳಿಸಿದ್ದ ನಿಷೇಧವನ್ನ ತೀವ್ರ ತಪಾಸಣೆ ಬಳಿಕ ತೆರವುಗೊಳಿಸಲಾಗಿದೆ. ಶ್ವೇತ ಭವನದ ನಿರ್ಬಂಧಿತ ಪ್ರದೇಶಕ್ಕೆ ವಿಮಾನವೊಂದು ಬಂದಿಳಿದ ಹಿನ್ನೆಲೆ ಇದು ಯಾವುದೋ ಶತ್ರುವಿನ ವಿಮಾನ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿತ್ತು. ನಿನ್ನೆ ಈ ವಿಮಾನದಿಂದ ಯಾವುದೇ ತೊಂದರೆ ಇಲ್ಲ ಎಂದು ವರದಿ ಬಂದಿದ್ದರಿಂದ ಪೊಲೀಸರು ಲಾಕ್​​ಡೌನ್​ ತೆರವುಗೊಳಿಸಿದ್ದಾರೆ. ಈ ಘಟನೆಯು ವಾಷಿಂಗ್ಟನ್‌ನಲ್ಲಿ ಸಾಕಷ್ಟು ಭೀತಿಯನ್ನುಂಟು ಮಾಡಿತ್ತು. ಹಾಗಾಗಿ ಯುಎಸ್ ಕ್ಯಾಪಿಟಲ್​​ನನ್ನು ಸ್ಥಳಾಂತರಿಸಲಾಗಿತ್ತು. ಅಲ್ಲದೇ ಶ್ವೇತಭವನದ ಸುತ್ತಮುತ್ತಲಿನ ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಈ ವಿಮಾನದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಶ್ವೇತಭವನದ ಲಾಕ್​ಡೌನ್​​ನನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

White House lockdown lifted after aircraft found out not to be 'hostile'

ಶ್ವೇತಭವನದೊಳಗೆ ಬಂದ ಅನುಮಾನಸ್ಪದ ವಿಮಾನ

ಎರಡು ಯುಎಸ್ ಕ್ಯಾಪಿಟಲ್ ಪೊಲೀಸ್ ಮೂಲಗಳ ಪ್ರಕಾರ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದ್ರೆ ಈ ವಿಮಾನ ಹೇಗೆ ಬಂದಿದೆ ಮತ್ತು ಎಲ್ಲಿಂದ ಬಂದಿರುವುದು ತಿಳಿದು ಬಂದಿಲ್ಲ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا