Urdu   /   English   /   Nawayathi

ಈ ಹಿಂದೆ ಸಿಎಂ ಕುರ್ಚಿಗಾಗಿ ಏನೇನೆಲ್ಲಾ ಡ್ರಾಮಾ.... ಹೇಗಿದ್ವು ರಾಜ್ಯಪಾಲರು, ರಾಷ್ಟ್ರಪತಿಗಳ ಮುಂದಿನ ಪರೇಡ್​!

share with us

ನವದೆಹಲಿ: 26 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನದ ಹಿಂದೆಯೂ ಅನೇಕ ರಾಜ್ಯಗಳಲ್ಲಿ ನಡೆದಿತ್ತು. ತಮ್ಮಗೆ ಸರ್ಕಾರ ರಚಿಸಲು ಬಹುಮತವಿದೆ ಎಂದು ಸಾಬೀತಪಡಿಸಲು ಬೆಂಬಲಿಗ ಶಾಸಕರೊಂದಿಗೆ ರಾಜ್ಯಪಾಲ ಮತ್ತು ರಾಷ್ಟ್ರಪತಿಗಳ ಮುಂದೆ ಪರೇಡ್​ ನಡೆಸಿದವರು.

ಆಂಧ್ರಪ್ರದೇಶ 1984:

1984ರ ಆಗಸ್ಟ್​​ ತಿಂಗಳಲ್ಲಿ​ ಎನ್​ಟಿಆರ್ ಹೃದಯ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಅಂದು ಹಣಕಾಸು ಸಚಿವರಾಗಿದ್ದ ಎನ್ ಭಾಸ್ಕರ ರಾವ್ ಅವರು ಕಾಂಗ್ರೆಸ್ ಸಹಾಯದಿಂದ ರಾಜಕೀಯ ದಂಗೆ ಎದ್ದರು. ಎನ್​ಟಿಆರ್​ ಮರಳಿ ಬರುವವರೆಗೂ ಟಿಡಿಪಿಯ 201 ಶಾಸಕರಲ್ಲಿ ಸುಮಾರು160 ಶಾಸಕರನ್ನು ಗೋಲ್ಕೊಂಡ ಜಂಕ್ಷನ್‌ ಬಳಿಯ ರಾಮಕೃಷ್ಣ ಸ್ಟುಡಿಯೋಸ್​ನಲ್ಲಿ ಇರಿಸಲಾಗಿತ್ತು. ಆರು ದಿನಗಳ ನಂತರ ಹಿಂದಿರುಗಿದ ಎನ್‌ಟಿಆರ್ ಅವರು, ಎಲ್ಲ ಶಾಸಕರನ್ನು ರೈಲಿನಲ್ಲಿ ದೆಹಲಿಗೆ ಕರೆದೊಯ್ದು ರಾಷ್ಟ್ರಪತಿ ಗ್ಯಾನ್ ಜೈಲ್ ಸಿಂಗ್ ಅವರ ಮುಂದೆ ಪರೇಡ್ ನಡೆಸಿದ್ದರು.

ಜಾರ್ಖಂಡ್​ 2005ರ ಮಾರ್ಚ್​ 3
ಗವರ್ನರ್ ಸೈಯದ್ ಸಿಬ್ಟೆ ರಾಜಿ ಅವರು ಸರ್ಕಾರ ರಚಿಸುವ ಎನ್‌ಡಿಎ ಕೂಟದ ಮನವಿ ತಿರಸ್ಕರಿಸಿದ ಬಳಿಕ ತಮ್ಮ 41 ಶಾಸಕರನ್ನು ಅಂದಿನ ರಾಷ್ಟ್ರಪತಿ ಅಬ್ದುಲ್​ ಕಲಾಂ ಅವರ ಮುಂದೆ ಬಹುಮತದ ಪರೇಡ್ ನಡೆಸಿದ್ದರು. ಚುನಾವಣಾ ಪೂರ್ವ - ಮೈತ್ರಿಕೂಟವಾಗಿ ಸರ್ಕಾರ ರಚಿಸುವ ತಮ್ಮ ಹಕ್ಕನ್ನು ರಾಜ್ಯಪಾಲರು ಕಸಿದುಕೊಂಡಿದ್ದಾರೆ ಎಂದು ದೂರಿದರು. ಈ ಬಳಿಕ ಕಾಂಗ್ರೆಸ್ - ಜೆಎಂಎಂ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿತ್ತು.

ಕರ್ನಾಟಕ
2007 ಅಕ್ಟೋಬರ್​ ವೇಳೆ ಕರ್ನಾಟಕದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ 129 ಶಾಸಕರು ಸರ್ಕಾರ ರಚಿಸಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಮುಂದೆ ಪರೇಡ್ ನಡೆಸಿದ್ದರು.

ಬಿಹಾರ 2015
ಜನತಾದಳ (ಯುನೈಟೆಡ್), ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಂಥೀಯ ಶಾಸಕರ ಬೆಂಬಲದೊಂದಿಗೆ ನಿತೀಶ್ ಕುಮಾರ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮುಂದೆ ಬಹುಮತ ಸಾಬೀತು ಪಡಿಸಲು ಪರೇಡ್ ನಡೆಸಿದ್ದರು.

ಉತ್ತರಾಖಂಡ್​
2016ರ ಮಾರ್ಚ್​ 26ರಂದು 24 ಗಂಟೆಯ ಒಳಗೆ ತಮ್ಮ ಬಹುಮತ ಸಾಬೀತುಪಡಿಸಬೇಕಾಗಿತ್ತು. 27ರಂದು ಸದನದಲ್ಲಿ ಬಹುಮತವನ್ನು ರಾವತ್ ಅವರು 34 ಶಾಸಕರ ನಿಯೋಗವನ್ನು ರಾಜ್ಯಭವನಕ್ಕೆ ಕರೆದೊಯ್ದು ಪರೇಡ್​ ನಡೆಸಿದ್ದರು. ಇದರಲ್ಲಿ ಆರು ಜನ ಸ್ವತಂತ್ರರ ಅಭ್ಯರ್ಥಿಗಳಿದ್ದರು. ಪ್ರೋಗ್ರೆಸ್ಸಿವ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಬಿಜೆಪಿಯ ಭಿನ್ನಮತೀಯ ಶಾಸಕ ಭೀಮ್ ಲಾಲ್ ಆರ್ಯ ಕೂಡ ಈ ನಿಯೋಗದಲ್ಲಿ ಇದ್ದರು.

ಅರುಣಾಚಲ ಪ್ರದೇಶ 2016
ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದರು. ಖಂಡು ಸೇರಿದಂತೆ 43 ಕಾಂಗ್ರೆಸ್​​ ಶಾಸಕರಲ್ಲಿ 33 ಜನ ಗುಡ್‌ಬೈ ಹೇಳಿ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ (ಪಿಪಿಎ) ಸೇರ್ಪಡೆಯಾಗಿದ್ದರು. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 33, ಬಿಜೆಪಿ 11, ಇಬ್ಬರು ಪಕ್ಷೇತರ ಶಾಸಕರಿದ್ದರು. ಸದನದಲ್ಲಿ ಬಹುಮತ ಸಾಬೀತುಪಡಿಸುವ ಮುನ್ನ ರಾಜ್ಯಪಾಲರ ಮುಂದೆ ಬಹುಮತದ ಪರೇಡ್ ನಡೆಸಿದ್ದರು.

ಸಿಕ್ಕಿಂ 2019
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್​ನ (ಎಸ್‍ಡಿಎಫ್‍) 13 ಶಾಸಕರಲ್ಲಿ 10 ಶಾಸಕರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಜೊತೆಗೆ ಒಟ್ಟು ಮತದಾನದಲ್ಲಿ ಶೇ 1.62ಕ್ಕೂ ಅಧಿಕ ಮತಗಳಿಸಲಿಲ್ಲ. ಈ ವರ್ಷದ ಏಪ್ರಿಲ್​ನಲ್ಲಿ ನಡೆದ ಚುನಾವಣೆಯಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್​ಕೆಎಂ) ಆಡಳಿತರೂಢ ಎಸ್​ಡಿಎಪ್​ ಅನ್ನು ಸೋಲಿಸಿತ್ತು. ಪಿ. ಎಸ್​​ ತಮಂಗ್​ ಅವರು ಎಸ್​​ಕೆಎಂ ಒಟ್ಟು 32 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಜಯಿಸಿತ್ತು. ಇದರೊಂದಿಗೆ ವಿಧಾನಸಭೆಯಲ್ಲಿ ಒಬ್ಬ ಶಾಸಕನನ್ನೂ ಹೊಂದಿರದ ಬಿಜೆಪಿ ದಿಢೀರ್​ ಎಂದು ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا