Urdu   /   English   /   Nawayathi

ರಾಜಕಾರಣಿಗಳಲ್ಲ, ಹೆಲ್ಮೆಟ್​ ಅಂಗಡಿ ಮಾಲೀಕರಿಂದ ''ಪ್ರಮಾಣ''ವಚನ..!

share with us

ಹೈದರಾಬಾದ್: 26 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕೆಲ ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಸಾರಿಗೆ ನೀತಿಯಿಂದಾಗಿ ಹೆಲ್ಮೆಟ್​ ಇಲ್ಲದೆ ವಾಹನ ಸವಾರರು ರಸ್ತೆಗಿಳಿಯೋದಕ್ಕೆ ಮುಂಚೆ ಒಂದೆರೆಡು ಬಾರಿ ಯೋಚಿಸುತ್ತಿದ್ದಾರೆ. ಭಾರಿ ದಂಡದಿಂದ ಪಾರಾಗುವುದಕ್ಕಾಗಿ ಯಾವುದೋ ಕಡಿಮೆ ಬೆಲೆಯ ಹೆಲ್ಮೆಟ್​ ಅನ್ನು ಖರೀದಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಸಂಚಾರಿ ಪೊಲೀಸರು ಹೆಲ್ಮೆಟ್​ ಹಾಕಿಕೊಳ್ಳದೇ ಬೈಕ್​ ಸವಾರಿ ಮಾಡುವವರನ್ನು ಕಂಡುಹಿಡಿಯಬಹುದು, ದಂಡ ಕಟ್ಟಿಸಿಕೊಳ್ಳಬಹುದು. ಆದ್ರೆ ಯಾವುದು ನಕಲಿ ಹೆಲ್ಮೆಟ್​​​​ ಹಾಗೂ ಯಾವುದು ಗುಣಮಟ್ಟದ ಹೆಲ್ಮೆಟ್​​ ಎಂಬುದನ್ನು ಕಂಡುಹಿಡಿಯೋದು ತುಂಬಾನೇ ಕಷ್ಟ. ಹೀಗಾಗಿ ಬುಡಮಟ್ಟದಿಂದಲೇ ಇದಕ್ಕೆ ಕತ್ತರಿ ಹಾಕಬೇಕೆಂದು ಹೈದರಾಬಾದ್​ನ ಸೈಬರಾಬಾದ್​ ಪೊಲೀಸರು ನಿರ್ಧರಿಸಿದ್ದಾರೆ. ಇವರ ಮೊದಲ ಟಾರ್ಗೆಟ್​ ಆಗಿದ್ದು, ನಕಲಿ ಹಾಗೂ ಕಡಿಮೆ ಗುಣಮಟ್ಟದ ಹೆಲ್ಮೆಟ್ ಮಾರುವ ಅಂಗಡಿಗಳ ಮಾಲೀಕರು. ನಕಲಿ ಹೆಲ್ಮೆಟ್​ಗಳ ಮಾರಾಟವನ್ನು ತಡೆಯುವ ಸಲುವಾಗಿ ಸೈಬರಾಬಾದ್​ ಪೊಲೀಸರಿಂದ ವಿಶೇಷ ತಂಡವನ್ನು ರಚಿಸಲಾಗಿತ್ತು. ಇದಕ್ಕೆ ರೋಡ್​ ಆಕ್ಸಿಡೆಂಡ್​​ ಕೇಸ್​​ ಮಾನಿಟರಿಂಗ್​ ಸೆಲ್​​ನ ಟ್ರಾಫಿಕ್​ ಇನ್ಸ್​​​​ಪೆಕ್ಟರ್​ ಎಂ ಶ್ರೀನಿವಾಸಲು ನೇತೃತ್ವ ವಹಿಸಿಕೊಂಡಿದ್ದರು. ಇವರ ನೇತೃತ್ವದಲ್ಲಿಯೇ ನಕಲಿ ಹಾಗೂ ಕಡಿಮೆ ಗುಣಮಟ್ಟದ ಹೆಲ್ಮೆಟ್​ ಮಾರುವ ಅಂಗಡಿಗಳ ಮೇಲೆ ದಾಳಿ ಮಾಡಲಾಯಿತು. ಸುಮಾರು 10 ಅಂಗಡಿಗಳ ಮೇಲೆ ದಾಳಿ ಮಾಡಿ ಎಫ್​ಐಆರ್​ ಕೂಡಾ ದಾಖಲಿಸಿಕೊಳ್ಳಲಾಯಿತು. ಇದೇ ವೇಳೆ ಅಂಗಡಿ ಮಾಲೀಕರಿಂದ ನಕಲಿ ಹೆಲ್ಮೆಟ್​ಗಳನ್ನು ಮಾರುವುದಿಲ್ಲ ಎಂದು ಪ್ರಮಾಣ ಮಾಡಿಸಿ ಗುಣಮಟ್ಟವಿಲ್ಲದ ಹೆಲ್ಮೆಟ್​ಗಳನ್ನು ನಾಶಪಡಿಸಲಾಯಿತು. ಇಷ್ಟು ಮಾತ್ರವಲ್ಲದೇ ಐಎಸ್​ಐ ರಹಿತ ಹೆಲ್ಮೆಟ್​ಗಳನ್ನು ಬಳಸದಂತೆ ಬೈಕ್​​ ಱಲಿ ಕೂಡಾ ಮಾಡಲಾಯಿತು. ಬೈಕ್​ ಸವಾರರಿಗೆ ಸಸಿಗಳನ್ನು ಕೂಡಾ ನೀಡಲಾಯಿತು. ಇದರಿಂದಾಗಿ ಹೆಲ್ಮೆಟ್​ ಅಂಗಡಿ ಮಾಲೀಕರೊಂದಿಗೆ ಜನರೂ ಕೂಡಾ ಜಾಗೃತರಾದರು. ಸೈಬರಾಬಾದ್​ ಠಾಣಾ ವ್ಯಾಪ್ತಿಯಲ್ಲಿ ಈವರೆಗೂ ಸಂಭವಿಸಿದ ಅಪಘಾತಗಳಲ್ಲಿ 720 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ 388 ಮಂದಿ ಬೈಕ್​ ಸವಾರರೇ ಆಗಿದ್ದಾರೆ. ಈ ಬೈಕ್​ ಸವಾರರು ಗುಣಮಟ್ಟದ ಹೆಲ್ಮೆಟ್​ ಬಳಸಿದ್ದರೆ ಸುಮಾರು ಅರ್ಧದಷ್ಟು ಮಂದಿಯ ಪ್ರಾಣ ಉಳಿಯುತಿತ್ತು ಎಂಬುದು ಪೊಲೀಸ್​ ಅಧಿಕಾರಿಗಳ ಮನದ ಮಾತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا