Urdu   /   English   /   Nawayathi

ಪ್ರಜಾಪ್ರಭುತ್ವದ ಕಗ್ಗೊಲೆ: ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

share with us

ನವದೆಹಲಿ: 25 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದಲ್ಲಿ ಬಿಜೆಪಿ ತರಾತುರಿಯಲ್ಲಿ ಸರ್ಕಾರ ರಚನೆ ಮಾಡಿದ ವಿಚಾರ ಲೋಕಸಭೆಯಲ್ಲಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಸಂಸತ್ತಿನ ಹೊರ ಭಾಗದಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಲೋಕಸಭೆ ಅಧಿವೇಶನದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಹುಲ್​ಗಾಂಧಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ಲೋಕಸಭೆಯಲ್ಲಿ ಮಾತನಾಡಿದ ರಾಹುಲ್​ಗಾಂಧಿ, ನಾನು ಒಂದು ಪ್ರಶ್ನೆಯನ್ನೂ ಕೇಳುವುದಿತ್ತು. ಆದರೆ, ಅದನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ ಎಂದರು. ಎನ್​ಸಿಪಿಯ ಅಜಿತ್​ ಪವಾರ್​ ಜೊತೆ ಸೇರಿ ಮಾಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ ವಿಚಾರದಲ್ಲಿ ಸೋನಿಯಾ ಗಾಂಧಿ ಮೌನ ಮುರಿದಿದ್ದಾರೆ. ಇಷ್ಟು ದಿನ ಈ ಬಗ್ಗೆ ಒಂದೂ ಮಾತನಾಡದ ಅವರು, ಇಂದು ಸಂಸತ್ತಿನ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಎಂದರು. ಕಾಂಗ್ರೆಸ್​ ನಾಯಕರು ಲೋಕಸಭೆಯಲ್ಲಿ ತೀವ್ರ ಗದ್ದಲ ನಡೆಸಿದರು. ‘ಸಂವಿಧಾನದ ಹತ್ಯೆ ನಿಲ್ಲಿಸಿ’ ಎಂದು ಕೂಗಾಟ ನಡೆಸಿದರು. ಹೀಗಾಗಿ ಲೋಕಸಭೆಯನ್ನು 12 ಗಂಟೆಯವರೆಗೆ ಹಾಗೂ ರಾಜ್ಯಸಭೆಯನ್ನು 2 ಗಂಟೆವರೆಗೆ ಮುಂದೂಡಲಾಯಿತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا