Urdu   /   English   /   Nawayathi

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಘರ್ಜಿಸಿದ ಪೊಲೀಸರ ರಿವಾಲ್ವರ್, ಮೂವರಿಗೆ ಗುಂಡೇಟು..!

share with us

ಬೆಂಗಳೂರು: 24 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ)ನಗರದಲ್ಲಿ ಪೊಲೀಸರ ರಿವಾಲ್ವರ್‍ಗಳು ಮತ್ತೆ ಘರ್ಜಿಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಮೂವರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ನಡೆಸಿದ ಹಳೇ ಆರೋಪಿ ಮತ್ತು ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕೊಲೆ ಆರೋಪಿಗಳಿಗೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

# ಹಳೇ ಆರೋಪಿಗೆ ಗುಂಡು: ಉದ್ಯಮಿ ಯೊಬ್ಬರ ಹತ್ಯೆಗೆ ಯತ್ನಿಸಿದ ಹಳೇ ಆರೋಪಿ ಪೀಣ್ಯ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಪೊಲೀಸರ ಕಾರ್ಯಾಚರಣೆ ವೇಳೆ ತಿರುಗಿ ಬಿದ್ದಿದ್ದ ಪ್ರಭು ಅಲಿಯಾಸ್ ತಮಿಳ್ ಪ್ರಭು ಎಂಬಾತನಿಗೆ ಗುಂಡು ತಗುಲಿದ್ದು, ಆರೋಪಿಯ ಪ್ರತಿದಾಳಿಯಿಂದ ಇಬ್ಬರು ಹೆಡ್ ಕಾನ್‍ಸ್ಟೆಬಲ್‍ಗಳಿಗೆ ಗಾಯಗಳಾಗಿವೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನ.6 ರಂದು ಆರೋಪಿ ತಮಿಳ್ ಪ್ರಭು (30) ಮಚ್ಚಿನಿಂದ ಉದ್ಯಮಿ ಸೋಮನಾಥ್ ಎಂಬುವರನ್ನು ಕೊಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದ. ಸೋಮನಾಥ್ ಅವರು ಪೀಣ್ಯದಲ್ಲಿ ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ಇವರ ಅಳಿಯ ನಾಗೇಶ್ ಎಂಬುವರು ತಮಿಳ್‍ಪ್ರಭುಗೆ 10 ಲಕ್ಷ ರೂ. ನೀಡಿ ಕೊಲೆ ಮಾಡಲು ಸೂಚಿಸಿದ್ದರು ಎಂಬ ಆರೋಪವಿದೆ. ಅದರಂತೆ ತಮಿಳ್‍ಪ್ರಭು ಅವರ ಕೊಲೆಗೆ ವಿಫಲ ಯತ್ನ ನಡೆಸಿದ್ದ. ಕಳೆದ ರಾತ್ರಿ ಪೀಣ್ಯ ಬಳಿಯ ತಿಪ್ಪೇನಹಳ್ಳಿಯಲ್ಲಿ ರಾಮು ಮತ್ತು ಬಾಲಮುರಳಿ ಎಂಬುವರನ್ನು ದರೋಡೆ ಮಾಡಿದ ತಮಿಳ್‍ಪ್ರಭು, ಒಬ್ಬರಿಂದ ಹಣ ಮತ್ತು ಮೊಬೈಲ್ ಕಸಿದುಕೊಂಡಿದ್ದು, ಇನ್ನೊಬ್ಬರಿಂದ ಸ್ಕೂಟರ್ ಕಿತ್ತುಕೊಂಡಿದ್ದ. ದರೋಡೆ ಮಾಡಿದ ಸ್ಕೂಟರ್‍ನಲ್ಲಿ ಆರೋಪಿ ತನ್ನ ಸಹಚರರ ಜೊತೆ ಪ್ರಯಾಣಿಸುತ್ತಿದ್ದಾನೆ. ತಿಪ್ಪೇನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಆರೋಪಿ ಇದ್ದಾನೆ ಎಂಬ ಮಾಹಿತಿ ಆಧರಿಸಿ ಪೀಣ್ಯ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮುದ್ದುರಾಜು ಅವರು ಸಿಬ್ಬಂದಿಗಳ ಜೊತೆ ತೆರಳಿ ಬಂಧಿಸಲು ಪ್ರಯತ್ನಿಸಿದರು. ಈ ವೇಳೆ ಪ್ರಭು ಪೊಲೀಸ್ ಹೆಡ್‍ಕಾನ್‍ಸ್ಟೆಬಲ್‍ಗಳಾದ ರಾಮಮೂರ್ತಿ ಮತ್ತು ರಂಗಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಇನ್‍ಸ್ಪೆಕ್ಟರ್ ಮುದ್ದುರಾಜು ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಿದರೂ ಶರಣಾಗದೆ ದಾಳಿ ಮುಂದುವರಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಕೂಡಲೇ ಗಾಯಗೊಂಡ ಇಬ್ಬರು ಹೆಡ್‍ಕಾನ್‍ಸ್ಟೆಬಲ್‍ಗಳು ಹಾಗೂ ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗುಂಡೇಟು ತಿಂದ ತಮಿಳ್‍ಪ್ರಭು ಹಳೇ ಆರೋಪಿಯಾಗಿದ್ದು, ಈತನ ಮೇಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಸುಪಾರಿ ಹತ್ಯೆ ಪ್ರಯತ್ನ, ಹಲ್ಲೆ, ದರೋಡೆ ಸೇರಿದಂತೆ ಮೂರು ಪ್ರಕರಣಗಳು ಮತ್ತು ರಾಜಗೋಪಾಲನಗರದಲ್ಲಿ ಒಂದು ಡಕಾಯಿತಿ ಪ್ರಕರಣ ದಾಖಲಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಈ ಸಂಜೆಗೆ ತಿಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا