Urdu   /   English   /   Nawayathi

‘ಮಹಾ’ ಸರ್ಕಾರ ರಚನೆಗೆ ಸಂಬಂಧಿಸಿದ 2 ದಾಖಲೆ ನೀಡಲು ಕೋರ್ಟ್‌ ಸೂಚನೆ: ನಾಳೆಗೆ ಆದೇಶ

share with us

ಮುಂಬೈ: 24 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದ ಎರಡು ಮುಖ್ಯ ದಾಖಲೆಗಳನ್ನು ಹಾಜರುಪಡಿಸಲು ಸಾಲಿಸೀಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ನಾಳೆಗೆ ಆದೇಶ ನೀಡುವುದಾಗಿ ತಿಳಿಸಿದೆ. ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸಿದ ಪತ್ರ ಮತ್ತು ಸರ್ಕಾರ ರಚನೆ ಮಾಡಲು ದೇವೇಂದ್ರ ಫಡಣವೀಸ್‌ ಅವರಿಗೆ ಇರುವ ಅಗತ್ಯ ಸಂಖ್ಯೆಯ ಶಾಸಕರ ಸಹಿಯುಳ್ಳ ಪತ್ರವನ್ನು ಪೀಠದೆದುರು ಹಾಜರುಪಡಿಸುವಂತೆ ಕೋರ್ಟ್‌ ಹೇಳಿತು. 

Bar & Bench@barandbench

 · 6h

Replying to @barandbench and 14 others

Court also issues notice to Devendra Fadnavis, Ajit Pawar, UOI, and State of Maharashtra@Dev_Fadnavis @AjitPawarSpeaks

Bar & Bench@barandbench

[Breaking] Maharashtra Crisis: SC asks for production of letters related to govt formation, to pass orders tomorrow@DrAMSinghvi @KapilSibal @rssurjewala @Dev_Fadnavis @AjitPawarSpeaks https://barandbench.com/breaking-maharashtra-political-crisis-supreme-court-asks-for-production-of-letters-related-to-govt-formation-to-pass-orders-tomorrow/ …

Maharashtra Political Crisis: Supreme Court asks for govt formation letters

In the case related to the political crisis in Maharashtra, the Supreme Court called for the letters related to formation of the government in the state.

barandbench.com

87

12:45 PM - Nov 24, 2019

Twitter Ads info and privacy

62 people are talking about this

ಇದೇ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್‌.ವಿ ರಮಣ, ಅಶೋಕ್‌ ಭೂಷಣ್‌ ಮತ್ತು ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಅರ್ಜಿಯನ್ನು ಕೈಗೆತ್ತಿಕೊಂಡಿತು. ಹಿರಿಯ ವಕೀಲ ಕಪಿಲ್‌ ಸಿಬಲ್‌, ಅಭಿಷೇಕ್‌ ಮನು ಸಿಂಘ್ವಿ ಅವರು ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಪರ ವಾದಿಸಿದರೆ, ಮಾಜಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಬಿಜೆಪಿ ಪರ ವಾದಿಸಿದರು. 

ANI@ANI

Supreme Court says, appropriate orders to be passed tomorrow. https://twitter.com/ANI/status/1198496476206370816 …

ANI@ANI

SC issues notice to Centre, Maharashtra Govt, Devendra Fadnavis&Ajit Pawar on Congress-NCP-Shiv Sena's plea. We request Solicitor General Tushar Mehta to produce relevant documents from Guv’s letter for inviting BJP to form govt & letter of support of MLAs by 10.30 am tomorrow.

View image on Twitter

248

12:30 PM - Nov 24, 2019

Twitter Ads info and privacy

72 people are talking about this

ಸಿಂಘ್ವಿ ಮತ್ತು ಸಿಬಲ್‌ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದು ತಮ್ಮ ವಾದದಲ್ಲಿ ಪ್ರತಿಪಾದಿಸಿದರು. 

ಎರಡೂ ಕಡೆಯ ವಾದಗಳನ್ನು ಆಲಿಸಿದ ಪೀಠ ಸರ್ಕಾರ ರಚನೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಿತು. ಅಲ್ಲದೆ, ದಾಖಲೆಗಳ ಆಧಾರದಲ್ಲಿ ನಾಳೆ ಆದೇಶ ನೀಡುವುದಾಗಿ ತಿಳಿಸಿತು. 

ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿಯು ಶಿವಸೇನೆ ಮೈತ್ರಿಯೊಂದಿಗೆ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತಾದರೂ, ಸೇನಾದ ಅನಿರೀಕ್ಷಿತ ನಡೆಯಿಂದಾಗಿ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. ನಂತರ, ಮೂರೂ ಪಕ್ಷಗಳು  (ಬಿಜೆಪಿ, ಶಿವಸೇನೆ, ಎನ್‌ಸಿಪಿ) ಸರ್ಕಾರ ರಚನೆ ಮಾಡದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು.

Bar & Bench@barandbench

 · 22h

Replying to @barandbench

The petition by Shiv Sena, NCP, Congress alliance has been filed now.

File being processed by the SC registry.

Parties have sought an urgent hearing and may request a meeting with
Secretary General of the SC if the Registry says there's no urgency.

Bar & Bench@barandbench

Breaking: Maharashtra Crisis: Shiv Sena, NCP, Congress approach Supreme Court against "minority" BJP govt
@ShivSena @Dev_Fadnavis
@INCIndia @ncpspeaks @AjitPawarSpeaks @PawarSpeakshttps://barandbench.com/breaking-maharashtra-crisis-shiv-sena-ncp-congress-approach-supreme-court-against-minority-bjp-govt/ …

Maharashtra Crisis: Shiv Sena, NCP, Congress approach Supreme Court

The Shiv Sena, Nationalist Congress Party (NCP), and the Indian National Congress have approached the Supreme Court after the country woke up to the news of BJP leader Devendra Fadnavis being sworn...

barandbench.com

95

8:55 PM - Nov 23, 2019

Twitter Ads info and privacy

48 people are talking about this

ಹೀಗಾಗಿ, ಸರ್ಕಾರ ರಚನೆ ಮಾಡಲು ನಮಗೆ ಸೂಕ್ತ ಕಾಲವಕಾಶ ನೀಡಿಲ್ಲ ಎಂದು ಆರೋಪಿಸಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಈಗಾಗಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ.

ಈ ನಡುವೆಯೇ ಶನಿವಾರ (ನ.23) ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಎನ್‌ಸಿಪಿಯ ಒಂದು ಬಣದ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿ ತಾವು ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ರಾಜ್ಯದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ದೀಢರ್‌ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಆತುರಾತುರವಾಗಿ ದೇವೇಂದ್ರ ಫಡಣವೀಸ್‌ ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲರ ನಡೆಯನ್ನು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ.

Bar & Bench@barandbench

 · 19h

Replying to @barandbench

Bench of Justices NV Ramana, Ashok Bhushan and Sanjiv Khanna to hear Shiv Sena, NCP and Congress plea tomorrow at 11.30am

Bar & Bench@barandbench

Maharashtra Crisis: Supreme Court Bench headed by Justice NV Ramana to hear a plea by Shiv Sena, NCP and Congress https://barandbench.com/maharashtra-crisis-supreme-court-bench-headed-justice-nv-ramana-to-hear-plea/ …

Maharashtra Crisis: Supreme Court notifies bench to hear the petition

Bench of Justices NV Ramana, Ashok Bhushan, and Sanjiv Khanna will hear the plea filed by Shiv Sena, NCP and Congress against Maharashtra Governor decision

barandbench.com

115

11:14 PM - Nov 23, 2019

Twitter Ads info and privacy

55 people are talking about this

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಅರ್ಜಿಯ ವಿಚಾರಣೆಯ ನಂತರದ ಬೆಳವಣಿಗೆಯು ಮಹಾರಾಷ್ಟ್ರ ರಾಜಕೀಯವನ್ನು ಮತ್ತಷ್ಟೂ ಕೌತುಕಭರಿತವಾಗಿ ಮಾಡಿದೆ. 

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا