Urdu   /   English   /   Nawayathi

ಪಾಕಿಸ್ಥಾನದಲ್ಲಿ ಪತ್ರಕರ್ತರಿಗೂ ಭದ್ರತೆಯಿಲ್ಲ: ಕೊಲೆಯಾದವರ ಸಂಖ್ಯೆ ಎಷ್ಟು ಗೊತ್ತಾ?

share with us

ಇಸ್ಲಮಾಬಾದ್: 24 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನೆರೆ ರಾಷ್ಟ್ರ ಪಾಕಿಸ್ಥಾನದಲ್ಲಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಪಾಕ್ ನಲ್ಲಿ ಪತ್ರಕರ್ತರಿಗೂ ಭದ್ರತೆಯಿಲ್ಲ. ಕಳೆದ ಆರು ವರ್ಷಗಳಲ್ಲಿ ಸುಮಾರು 33 ವೃತ್ತಿನಿರತ ಪತ್ರಕರ್ತರು ಕೊಲೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಪಾಕಿಸ್ಥಾನ ಪ್ರೆಸ್ ಫೌಂಡೇಶನ್ ವರದಿಯ ಪ್ರಕಾರ 2002ರಿಂದ 2019ರವರೆಗೆ 48 ಪತ್ರಕರ್ತರು ದಾಳಿಯಲ್ಲಿ ಹತರಾಗಿದ್ದಾರೆ. 171 ಮಂದಿ ಗಂಭಿರ ಗಾಯಗೊಂಡಿದ್ದರೆ, 77 ವರದಿಗಾರರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಪಾಕಿಸ್ಥಾನದ ಮಾತ್ರವಲ್ಲದೇ ಇತರ ದೇಶದ, ಪಾಕ್ ನಲ್ಲಿರುವ ಪತ್ರಕರ್ತರಿಗೂ ಯಾವುದೇ ಸುರಕ್ಷತೆ ಇಲ್ಲದಾಗಿದೆ. ಅಮೇರಿಕಾದ ಪತ್ರಕರ್ತ ಡ್ಯಾನಿಯೆಲ್ ಪರ್ಲ್ ರನ್ನು ಇತ್ತೀಚೆಗೆ ಉಗ್ರರು ಅಪಹರಿಸಿ ಕೊಂದಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا