Urdu   /   English   /   Nawayathi

ಸಂಭವಿಸುವ ದೊಡ್ಡ ಅನಾಹುತದಿಂದ ಪಾರಾದ 32 ಬಸ್ ಪ್ರಯಾಣಿಕರು

share with us

ಹೊನ್ನಾವರ: 23 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಹೊನ್ನಾವರ ತಾಲೂಕಿನ ಹೊಸಗದ್ದೆಯ ಹತ್ತಿರ ನಿನ್ನೆ ಮಧ್ಯಾಹ್ನ ಸುಮಾರು 2:30ಕ್ಕೆ ಪ್ರಯಾಣಿಕರಿಂದ ತುಂಬಿದ್ದ ಸರ್ಕಾರಿ ಬಸ್ಸೊಂದು ಬ್ರೇಕ್ ಫೇಲ್ ಆದ ಬಳಿಕ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತದಿಂದ ಪಾರಾಗಿದೆ ಎನ್ನಲಾಗಿದೆ. ಶುಕ್ರವಾರದಂದು ಮಧ್ಯಾಹ್ನ ಸುಮಾರು 2ಗಂಟೆಗೆ ಹೊನ್ನಾವರದಿಂದ ಹೊರಟ ಸರ್ಕಾರಿ ಬಸ್ ಹೊಸಗದ್ದೆಯ ಬಳಿ ಬ್ರೇಕ್ ಫೇಲ್ ಆದ ನಂತರ ಏರಿನಲ್ಲಿ ಹಿಮ್ಮಖವಾಗಿ ಚಲಿಸುತ್ತಾ ಹಿಂದೆ ಬರುತ್ತಿದ್ದಾಗ ಚಾಲಕನ ಸಮಯಪ್ರಜ್ಞೆಯಿಂದ ಚಾಲಕ ವಾಹನವನ್ನು ದೊಡ್ಡ ಕಂದಕಕ್ಕೆ ಉರುಳುವುದನ್ನು ತಪ್ಪಿಸಿ ಪಕ್ಕದಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸುವುದರಲ್ಲಿ ಯಶಸ್ವಿಯಾಗಿದ್ದಾನೆ. ಬಸ್ಸಿನಲ್ಲಿ ಸುಮಾರು 32 ಪ್ರಯಾಣಿಕರಿದ್ದು ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا