Urdu   /   English   /   Nawayathi

ಪಾಕಿಸ್ತಾನಕ್ಕೆ ಟೊಮಾಟೋ ಶಾಕ್, ಒಂದು ಕೆಜಿಗೆ 400 ರೂ.!

share with us

ಇಸ್ಲಾಮಾಬಾದ್: 20 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಟೊಮಾಟೋ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ಒಂದು ಕೆಜಿ ಗೆ ಬರೋಬ್ಬರಿ 400 ರೂ. ನಷ್ಟಿದೆ ಎಂದು ಡಾನ್ ಪತ್ರಿಕೆ ಬುಧವಾರ ವರದಿ ಮಾಡಿದೆ. ಇರಾನ್ ನಿಂದ ಟೊಮಾಟೋಗೆ ಯಾವುದೇ ಬೆಲೆ ನಿಗದಿಯಾಗದ ಕಾರಣ, ವರ್ತಕರು ಸ್ವಾತ್ ಮತ್ತು ಸಿಂಧ್ ಬೆಳೆಗಳಿಗೆ ಇರಾನ್ ಟೊಮಾಟೋ ಬೆಲೆ ನಿಗದಿಪಡಿಸಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಸ್ಥಳೀಯ ಆಡಳಿತ ರೂಢಿಯಂತೆ ವಾಸ್ತವದಲ್ಲಿಲ್ಲದ ದರವನ್ನು ಪ್ರಕಟಿಸಿದೆ. ನವೆಂಬರ್ ಮೊದಲ ವಾರದಲ್ಲಿ ಟೊಮಾಟೋ ಅಧಿಕೃತ ದರ ಕೆಜಿಗೆ 117 ರೂ. ನಷ್ಟಿತ್ತು. ಮಂಗಳವಾರದ ಬೆಲೆ 193 ರೂ ಇದ್ದು ಅಧಿಕೃತ ಬೆಲೆ ಏರಿಕೆಯನ್ನು ಸರ್ಕಾರವೇ ಮಾಡುತ್ತಿದೆ ಎಂಬುದು ಗೋಚರಿಸುತ್ತಿದೆ. ಪುಲ್ವಾಮ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನಕ್ಕೆ ನೀಡಿದ್ದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನ ಮಾನವನ್ನು ಹಿಂಪಡೆದಿದ್ದು, ಇದು ಪಾಕಿಸ್ತಾನದ ಆರ್ಥಿಕತೆಗೆ ಭಾರತ ನೀಡಿದ ದೊಡ್ಡ ಹೊಡೆತವಾಯಿತು. ಇದಾದ ನಂತರ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕೇವಲ ಟೊಮೊಟೋ ಮಾತ್ರವಲ್ಲದೆ ಇತರೆ ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಸಹ ಏರಿಕೆಯಾಗಿದ್ದು, ಪಾಕ್ ದೊಡ್ಡ ಹೊಡೆತವನ್ನೇ ಅನುಭವಿಸುತ್ತಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا