Urdu   /   English   /   Nawayathi

ಹೊಂಡ ಮುಚ್ಚಿ ಟೆಂಪೊ ಮಾಲೀಕ- ಚಾಲಕರ ಪ್ರತಿಭಟನೆ

share with us

ಸಿದ್ದಾಪುರ: 13 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಂಚಾರಕ್ಕೆ ಕಂಟಕವಾಗಿರುವ ರಸ್ತೆಗಳ ಹೊಂಡ, ತಗ್ಗುಗಳಿಗೆ ಮಣ್ಣು ತುಂಬಿ ಸರಿಪಡಿಸುವ ಮೂಲಕ ತಾಲೂಕಿನ ಟೆಂಪೊ ಮಾಲೀಕ-ಚಾಲಕರ ಸಂಘದ ಸದಸ್ಯರು ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು. ಸಂಘದ 30 ಸದಸ್ಯರು ಗುದ್ದಲಿ, ಪಿಕಾಸಿ, ಬುಟ್ಟಿ, ಹಿಡಿದು ಸಿದ್ದಾಪುರ-ಕುಮಟಾ ರಸ್ತೆಯ ಕೆಇಬಿ ಗ್ರಿಡ್​ನಿಂದ ರಸ್ತೆಯಲ್ಲಿನ ಹೊಂಡ ಮುಚ್ಚಿದರು. ನಿತ್ಯದ ಆದಾಯ, ವೇತನ ನಂಬಿಕೊಂಡಿರುವ ಟೆಂಪೊ ಮಾಲೀಕ-ಚಾಲಕರು ಆ ಬಗ್ಗೆ ಚಿಂತಿಸದೇ ಇಡೀ ದಿನ ರಸ್ತೆ ದುರಸ್ತಿ ಕೆಲಸದಲ್ಲಿ ತೊಡಗಿ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದರು.

ಇತರ ರಸ್ತೆಗಳನ್ನೂ ದುರಸ್ತಿ ಮಾಡ್ತುತೇವೆ: ಕುಮಟಾ ರಸ್ತೆ ಅಲ್ಲದೆ, ತಾಲೂಕಿನ ಬಹುತೇಕ ಎಲ್ಲ ರಸ್ತೆಗಳು ಹೊಂಡ ಬಿದ್ದು ಹಾಳಾಗಿವೆ. ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಸರಿಪಡಿಸಬಹುದು ಎಂದು ಕಾಯ್ದೆವು. ಸರ್ಕಾರಕ್ಕೆ ಈ ಕುರಿತು ಹಲವು ಮನವಿ ಸಲ್ಲಿಸಿದೆವು, ಏನೂ ಪ್ರಯೋಜನವಾಗಲಿಲ್ಲ. ಮುಷ್ಕರ ಮಾಡುವ ಬದಲು ನಮ್ಮ ಶ್ರಮ ಸಾರ್ಥಕವಾಗಬೇಕು ಎನ್ನುವ ದೃಷ್ಟಿಯಿಂದ ಈ ರೀತಿಯ ಪ್ರತಿಭಟನೆಗೆ ಮುಂದಾಗಿದ್ದೇವೆ. ನಮ್ಮಲ್ಲಿ 16 ಟೆಂಪೊಗಳಿವೆ. ವಾಹನಗಳ ಸಂಚಾರ ನಿಲ್ಲಿಸಿ ಇಡೀ ದಿನ ರಸ್ತೆಯ ಹೊಂಡಗಳನ್ನು ತುಂಬುತ್ತೇವೆ. ಸರ್ಕಾರ ರಸ್ತೆಗಳ ದುರಸ್ತಿಗೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಇತರ ರಸ್ತೆಗಳ ಹೊಂಡಗಳನ್ನೂ ಸರಿಪಡಿಸುವ ಉದ್ದೇಶವಿದೆ. ಸಂಘದ ಸದಸ್ಯರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಗಣೇಶ ಪಿ. ಭಟ್ಟ ಮಾಧ್ಯಮದವರಿಗೆ ತಿಳಿಸಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا