Urdu   /   English   /   Nawayathi

ಬೆಂಗಳೂರಿನಲ್ಲಿ 178 ಅಪಾಯಕಾರಿ ಕಟ್ಟಡಗಳನ್ನು ಗುರುತಿಸಿದ ಪಾಲಿಕೆ

share with us

ಬೆಂಗಳೂರು: 12 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ಬಿಬಿಎಂಪಿ ನಗರ ಯೋಜನಾ ವಿಭಾಗ ಇತ್ತೀಚಿಗೆ ನಡೆಸಿದ ಸಮೀಕ್ಷೆಯಲ್ಲಿ 178 ಅಪಾಯಕಾರಿ ಕಟ್ಟಡಗಳನ್ನು ಗುರುತಿಸಲಾಗಿದೆ.  ಇದರಲ್ಲಿ 78 ಕಟ್ಟಡಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ನಗರ ಯೋಜನಾ ಕಾಯ್ದೆ  ಸೆಕ್ಷನ್ 322ರ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದೆ. ಹಳೆಯ ಶಿಥಿಲಗೊಂಡ ಕಟ್ಟಡಗಳ ಸಮೀಕ್ಷೆಯನ್ನು ಎರಡು ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಬಿಬಿಎಂಪಿ ಕಟ್ಟಡಗಳನ್ನು ಪುನರ್ ಸ್ಥಾಪಿಸಿ ದುರಸ್ತಿ ಮಾಡಿ ಅದರ ಮಾಲೀಕರಿಗೆ ಸೂಚನೆ ನೀಡಲಾಗುವುದು, ಒಂದು ವೇಳೆ  ಕಟ್ಟಡವನ್ನು ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಧ್ವಂಸಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ . ಅನಿಲ್ ಕುಮಾರ್ ತಿಳಿಸಿದ್ದಾರೆ. ಅಸಮರ್ಪಕ ಒತ್ತುವರಿ ನೀತಿಗೆ ಎಂಜಿನಿಯರ್ ಮತ್ತು ಅಧಿಕಾರಿಗಳೇ ಕಾರಣ ಎನ್ನುವುದನ್ನು ಒಪ್ಪಿಕೊಳ್ಳುವ ಆಯುಕ್ತರು, ಹಲವು ಪ್ರಕರಣಗಳಲ್ಲಿ ಜನರು ಆರಂಭದ  ಪ್ರಮಾಣ ಪತ್ರ ಪಡೆಯಲು ಅರ್ಜಿಯನ್ನೇ ಸಲ್ಲಿಸಿಲ್ಲ .ಕೇವಲ ಒಂದೇ ಒಂದು ತಂಡದಿಂದ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸದೃಢ ವಿಭಾಗದ ಅಗತ್ಯವಿದೆ ಎನ್ನುತ್ತಾರೆ. ನಗರದ ಮ್ಯಾಪಿಂಗ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಮತ್ತು ಇದು ಹೆಚ್ಚು ದುರ್ಬಲ ಸ್ಥಳಗಳಲ್ಲಿ  ಪ್ರಾರಂಭವಾಗುತ್ತದೆ.  ಸುಬ್ರಮಣ್ಯನಗರ ಹಾಗೂ ರಾಜಾಜಿನಗರ ಎರಡನೇ ಹಂತದ ಮಿಲ್ಕ್ ಕಾಲೋನಿಯಲ್ಲಿ ಇದನ್ನು ಆರಂಭಿಸಲಾಗುವುದು ಎಂದು ಅನಿಲ್ ಕುಮಾರ್ ತಿಳಿಸಿದರು. ಬಿಬಿಎಂಪಿ ದಾಖಲೆಗಳ ಪ್ರಕಾರ ಯಲಹಂಕದಲ್ಲಿ 61, ಬೆಂಗಳೂರು ಪೂರ್ವದಲ್ಲಿ 49 ಹಾಗೂ ಪಶ್ಟಿಮ, ದಕ್ಷಿಣದಲ್ಲಿ ತಲಾ 33 ಅಪಾಯಕಾರಿ ಕಟ್ಟಡಗಳನ್ನು ಗುರುತಿಸಲಾಗಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا