Urdu   /   English   /   Nawayathi

'ಮಹಾ' ಕಗ್ಗಂಟು: ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ, ಸುಪ್ರೀಂ ಮೊರೆ ಹೋದ ಶಿವಸೇನೆ

share with us

ಮುಂಬೈ: 12 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದಲ್ಲಿನ ರಾಜಕೀಯ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದೆ. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಸರ್ಕಾರ ರಚಿಸಲು ಬಿಜೆಪಿ ಎರಡು ದಿನ ಅವಕಾಶ ನೀಡಿದ್ದ ರಾಜ್ಯಪಾಲರು ಶಿವಸೇನೆಗೆ ಕೇವಲ 24 ಗಂಟೆಗಳ ಗಡುವು ನೀಡಿದ್ದರು. ಶಿವಸೇನಾ ಕೂಡಾ ಸರ್ಕಾರ ರಚಿಸುವಲ್ಲಿ ವಿಫಲವಾಗಿದ್ದರಿಂದ ಮೂರನೇ ದೊಡ್ಡ ಪಕ್ಷವಾಗಿರುವ ಎನ್ ಸಿಪಿಗೆ ಇಂದು ರಾತ್ರಿ 8-30ರವರೆಗೆ ಗಡುವನ್ನು ನೀಡಲಾಗಿದೆ. ಆದಾಗ್ಯೂ, ಈ ಗಡುವು ಮುಗಿಯದಿದ್ದರೂ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಮಾಡಿರುವ ಶಿಫಾರಸನ್ನು ಶಿವಸೇನೆ ಪ್ರಶ್ನಿಸಿದೆ. ಕಾಂಗ್ರೆಸ್ ಮುಖಂಡ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್  ಶಿವಸೇನೆ ಪರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ, ಸರ್ಕಾರ ರಚಿಸಲು ಶಿವಸೇನೆಗೆ 48 ಗಂಟೆಗಳ ಕಾಲಾವಕಾಶ ನೀಡದ ರಾಜ್ಯಪಾಲರು ಬಿಜೆಪಿಗೆ 5 ವಾರಗಳ ಕಾಲಾವಕಾಶ ನೀಡುತ್ತಾರೆ. ರಾಜಕೀಯ ದುರುದ್ದೇಶಕ್ಕಾಗಿ ಸಾಂವಿಧಾನಿಕ ಹುದ್ದೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ET Politics✔@ETPolitics

Governor of Maharashtra cannot give 48 hours to for but BJP can avail 5 weeks in other states is an arbitrary use of power by the Governor. This is what happens when constitutional posts are used to further political motivations: @DrAMSinghvi

View image on Twitter

262

3:00 PM - Nov 12, 2019

Twitter Ads info and privacy

119 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا