Urdu   /   English   /   Nawayathi

ಅಬ್ಬಬ್ಬಾ, ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಬೆಕ್ಕು, ವಿಡಿಯೋ ವೈರಲ್!

share with us

ಕೊಲಂಬಿಯಾ: 11 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಾಕು ಪ್ರಾಣಿಗಳು ಕೆಲವೊಮ್ಮೆ ಅಪಾಯಕಾರಿಯಾಗುತ್ತವೆ. ಆದರೆ ಇಲ್ಲೊಂದು ಸಾಕು ಬೆಕ್ಕು ಮನೆಯ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದೆ. ಈ ವಿಡಿಯೋ ಕ್ಷಣ ಮಾತ್ರದಲ್ಲಿ ಎದೆ ಝಲ್ ಎನ್ನುವಂತೆ ಮಾಡುತ್ತದೆ. ಕೊಲಂಬಿಯಾದಲ್ಲಿ ಈ ಘಟನೆ ನಡೆದಿದೆ. ಕಳೆದ ಅಕ್ಟೋಬರ್ 31ರಂದು ಅಪಾರ್ಟ್ ಮೆಂಟ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಈ ವಿಡಿಯೋವನ್ನು ಸದ್ಯ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದ್ದು ಬೆಕ್ಕನ್ನು ಹೀರೋ ಎಂದೆಲ್ಲಾ ನೆಟಿಗರು ಪ್ರಶಂಸಿಸಿದ್ದಾರೆ. ಮನೆಯ ಮುಂದಿನ ಆವರಣದಲ್ಲಿ ಮಗುವೊಂದು ಆಡುತ್ತಿತ್ತು. ಈ ವೇಳೆ ಸಾಕು ಬೆಕ್ಕು ಸಹ ಮಗುವಿನೊಂದಿಗೆ ಚೆಲ್ಲಾಟವಾಡುತ್ತಿತ್ತು. ಬೆಕ್ಕು ಸ್ವಲ್ಪ ದೂರದಲ್ಲಿದ್ದಾಗ ಮಗು ದಿಧೀರ್ ಅಂತಾ ಮೆಟ್ಟಿಲುಗಳ ಹತ್ತಿರಕ್ಕೆ ಬರುತ್ತದೆ. ಇದನ್ನು ಕಂಡ ಬೆಕ್ಕು ಕ್ಷಣ ಮಾತ್ರದಲ್ಲಿ ಓಡಿ ಬಂದು ಮಗು ಕೆಳಗೆ ಬೀಳದಂತೆ ಹಿಡಿದುಕೊಳ್ಳುತ್ತದೆ. ನಂತರ ಮಗು ಆಟದಲ್ಲಿ ಸಕ್ರೀಯವಾಗುತ್ತದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا