Urdu   /   English   /   Nawayathi

ಮಂಗಳೂರಿನಲ್ಲಿ ಡೆಂಗ್ಯು, ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ

share with us

ಮಂಗಳೂರು: 09 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್ಯು, ಮಲೇರಿಯಾ ಕಾಯಿಲೆಗಳಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೊಳಗಾಗಿದರು. ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಮಾರಕ ರೋಗಗಳನ್ನು ಮನೆಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಡೆಂಗ್ಯು, ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಣಕ್ಕಾಗಿ ರಚಿಸಿದ್ದ 60 ಮಂದಿಯನ್ನೊಳಗೊಂಡ ಮಲೇರಿಯಾ ಸೆಲ್​ನ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡಲಿಲ್ಲ. ಅವರನ್ನು ಅಂದಿನ ಆಡಳಿತ ಸರ್ಕಾರ ನೀರಿನ ಬಿಲ್ ಕೊಡುವ ಮೀಟರ್ ರೀಡಿಂಗ್ ಕೆಲಸಕ್ಕೆ ನೇಮಿಸಿತು. ಇದರಿಂದ ನಗರದ ವಾರ್ಡ್​ಗಳಲ್ಲಿರುವ ಮನೆ ಮನೆಗೆ ತೆರಳಿ ಡೆಂಗ್ಯು, ಮಲೇರಿಯಾ ಹರಡದಂತೆ ಎಚ್ಚರವಹಿಸಲು ಹಾಗು ರೋಗಗಳನ್ನು ನಿಯಂತ್ರಿಸುವಲ್ಲಿ ಸಲಹೆ ನೀಡಬೇಕಾದವರು ಸಿಗದೆ ಜನರು ಸಂಕಷ್ಟಕ್ಕೊಳಗಾದರು ಎಂದು ಶೆಟ್ಟಿ ಆರೋಪಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا