Urdu   /   English   /   Nawayathi

ಸಾಂವಿಧಾನಿಕ ಪೀಠದ ಓರ್ವ ನ್ಯಾಯಮೂರ್ತಿ, ವಾದಿಸಿದ ಇಬ್ಬರು ವಕೀಲರು ದ.ಕನ್ನಡದವರು!

share with us

ಮಂಗಳೂರು: 09 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ ಸಾಂವಿಧಾನಿಕ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಓರ್ವರು ಹಾಗೂ ವಕೀಲರ ತಂಡದಲ್ಲಿದ್ದ ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ರಾಮಮಂದಿರ ವಿವಾದಿತ ಭೂಮಿಯ ಐತಿಹಾಸಿಕ ತೀರ್ಪು ನೀಡಿದ ಪಂಚಸದಸ್ಯ ಪೀಠದ ಸದಸ್ಯರಲ್ಲಿ ಓರ್ವರಾಗಿರುವ ನ್ಯಾ.ಅಬ್ದುಲ್ ನಜೀರ್ ಜೆ.ಜೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ‌ಮೂಡುಬಿದಿರೆ ತಾಲೂಕಿನ ಬೆಳುವಾಯಿಯವರು‌. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅಬ್ದುಲ್ ನಜೀರ್ 2017ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಈ ಹಿಂದೆ ತ್ರಿವಳಿ ತಲಾಖ್ ಪ್ರಕರಣದಲ್ಲೂ ಪ್ರಬುದ್ಧ ತೀರ್ಪು ನೀಡಿದ ನ್ಯಾಯಪೀಠದಲ್ಲಿಯೂ ಇವರಿದ್ದರು ಎನ್ನುವುದು ಗಮನಾರ್ಹ ವಿಚಾರ. ಇನ್ನು ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಹಾಗೂ ಸುಳ್ಯ ತಾಲೂಕಿನ ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಶರೀಫ್ ಎಂಬುವವರು ವಾದಿಸಿದ್ದಾರೆ. ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದ ಅಬ್ದುಲ್ ರಹಿಮಾನ್ ಬಳಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಸುನ್ನಿ ವಕ್ಫ್ ಮಂಡಳಿಯು ಬಾಬ್ರಿ ಮಸೀದಿ ಪರ ವಾದ ಮಂಡಿಸಲು ದೇಶದ ಪ್ರಬಲ ವಕೀಲರ ತಂಡವನ್ನು ಆಯ್ಕೆ ಮಾಡಿತ್ತು. ಈ ತಂಡದ ಸದಸ್ಯರಲ್ಲಿ ಅಬ್ದುಲ್‌ ರಹಿಮಾನ್ ಕೂಡಾ ಒಬ್ಬರಾಗಿದ್ದಾರೆ. ವಕೀಲ ಶರೀಫ್ ಸುಳ್ಯದ ಎನ್​ಎಂಸಿಯಲ್ಲಿ ಪದವಿ ಹಾಗೂ ಕೆವಿಜಿಯಲ್ಲಿ ಎಲ್​ಎಲ್​ಬಿ ಮುಗಿಸಿದ್ದು, ಸುಪ್ರೀಂಕೋರ್ಟ್​ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا