Urdu   /   English   /   Nawayathi

ಅಯೋಧ್ಯೆ ತೀರ್ಪು ಯಾರೊಬ್ಬರ ಸೋಲು, ಗೆಲುವಲ್ಲ: ಶಾಂತಿ ಕಾಪಾಡಲು ಪ್ರಧಾನಿ ಮೋದಿ ಮನವಿ

share with us

ನವದೆಹಲಿ: 09 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಾಳೆ ಸುಪ್ರೀಂಕೋರ್ಟ್​​ನಿಂದ ವಿವಾದಿತ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ಭೂವಿವಾದದ ಐತಿಹಾಸಿಕ ತೀರ್ಪು ಹೊರಬೀಳಲಿದ್ದು, ಇದೇ ವೇಳೆ ಶಾಂತಿ, ಸಾಮರಸ್ಯ, ಐಕ್ಯತೆ ಕಾಪಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಲ್ಲಿ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ಸುಪ್ರೀಂಕೋರ್ಟ್​ನಿಂದ ತೀರ್ಪು ಹೊರಬರಲಿರುವ ಕಾರಣ ಪ್ರಧಾನಿ ಟ್ವೀಟ್​ ಮೂಲಕ ಮನವಿ ಮಾಡಿದ್ದು, ಸುಪ್ರೀಂಕೋರ್ಟ್​​​ನಿಂದ ಅಯೋಧ್ಯೆ ಕುರಿತು ಯಾವುದೇ ನಿರ್ಧಾರ ಹೊರಬರಲಿ, ಅದು ಯಾರೊಬ್ಬರ ಸೋಲು ಅಥವಾ ಗೆಲುವು ಆಗುವುದಿಲ್ಲ. ಈ ತೀರ್ಪು ಭಾರತದ ಶಾಂತಿ, ಐಕ್ಯತೆ ಮತ್ತು ಸದ್ಭಾವನೆ ಸಂಪ್ರದಾಯ ಮತ್ತಷ್ಟು ಬಲಪಡಿಸಬೇಕು ಎಂಬುದು ನಮ್ಮೆಲ್ಲರ ಆದ್ಯತೆಯಾಗಲಿ ಎಂದು ಮನವಿ ಮಾಡಿದ್ದಾರೆ.

  • Narendra Modi@narendramodi

    अयोध्या पर सुप्रीम कोर्ट का जो भी फैसला आएगा, वो किसी की हार-जीत नहीं होगा। देशवासियों से मेरी अपील है कि हम सब की यह प्राथमिकता रहे कि ये फैसला भारत की शांति, एकता और सद्भावना की महान परंपरा को और बल दे।

    166K

    10:27 PM - Nov 8, 2019

    Twitter Ads info and privacy

    45.3K people are talking about this

ದೇಶದ ನ್ಯಾಯಾಂಗ ವ್ಯವಸ್ಥೆಯ ಗೌರವ ಉಳಿಸಿಕೊಂಡು, ಸಮಾಜದ ಎಲ್ಲಾ ವರ್ಗದವರು, ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ ಎಲ್ಲ ಪಕ್ಷಗಳ ಕಾರ್ಯವೂ ಶ್ಲಾಘನೀಯ. ನ್ಯಾಯಾಲಯದ ತೀರ್ಪಿನ ನಂತರವೂ ನಾವೆಲ್ಲರೂ ಒಟ್ಟಾಗಿ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಈ ಮಧ್ಯೆ ಟ್ವೀಟ್​ ಮಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​, ರಾಜ್ಯದ ಜನರಿಗೆ ಶಾಂತಿ ಕಾಪಾಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ. ಇದೇ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕೂಡ ಟ್ವೀಟ್​ ಮಾಡಿದ್ದು, ರಾಜ್ಯದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಯಾರೂ ಕೂಡಾ ಪ್ರಚೋದಿತ ಹೇಳಿಕೆ ನೀಡದಂತೆ ಕರೆ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا