Urdu   /   English   /   Nawayathi

ಕಾವೇರಿ ವೆಬ್​​ಸೈಟ್ ತಿರುಚಿದ ಆರೋಪ: 60 ಮಂದಿ ವಿಚಾರಣೆ ನಡೆಸಿದ ಸಿಸಿಬಿ

share with us

ಬೆಂಗಳೂರು: 07 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸರ್ಕಾರದ ಕಾವೇರಿ ವೆಬ್​​​ಸೈಟ್ ತಿರುಚಿ ಅಕ್ರಮವೆಸಗಿರುವ ಪ್ರಕರಣ ಸಂಬಂಧ ತನಿಖೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಸಿಸಿಬಿ ಡಿಸಿಪಿ ರವಿ ಅವರನ್ನ ನೇಮಿಸಿದ್ದಾರೆ. ಈಗಾಗಲೇ ಸಿಸಿಬಿ ತಂಡ ಸಬ್​​ರಿಜಿಸ್ಟ್ರಾರ್ ಕಚೇರಿಯ ಒಟ್ಟು 60 ಜನರ ವಿಚಾರಣೆ ನಡೆಸಿ ಮಾಹಿತಿ ಕಲೆ‌ ಹಾಕಿದ್ದು, ಇನ್ನೂ ಕೆಲವರ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಕಚೇರಿಗೆ ಬರುವಂತೆ ಅವರಿಗೆ ನೋಟಿಸ್ ನೀಡಲಾಗಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಕಾವೇರಿ ವೆಬ್​​ಸೈಟ್​​ನಲ್ಲಿ ನೊಂದಣಿಯಾಗದ ಸೈಟ್​​ಗಳನ್ನು ಅಕ್ರಮವಾಗಿ ನೋಂದಾಯಿಸಿ ಸರ್ಕಾರಕ್ಕೆ ಬರಬೇಕಾದ ಕೋಟ್ಯಾಂತರ ತೆರಿಗೆ ತಪ್ಪಿಸಿ ಲಂಚ ಪಡೆದಿರುವ ಆರೋಪ ಇದೆ. ಹೀಗಾಗಿ 60 ಜನರನ್ನ ವಿಚಾರಿಸಿ ಎಲ್ಲಿ ಏನಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಬುಧವಾರ ಡೆವಲಪರ್ ಸೋಮಣ್ಣ ಎಂಬವರನ್ನ ಬಂಧಿಸಲಾಗಿದೆ. ಈತ ಕಾವೇರಿ ಸಾಫ್ಟ್​ವೇರ್​​ನಲ್ಲಿ ತಿದ್ದುಪಡಿ ಮಾಡಿ ದಾಖಲಾತಿಗಳನ್ನು ತಿರುಚುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದರಲ್ಲಿ ಸೋಮಣ್ಣಗೆ ಯಾರೆಲ್ಲ ಸಹಾಯ ಮಾಡಿದ್ದಾರೋ ಅವರೆನ್ನಲ್ಲ ವಿಚಾರಣೆ ಮಾಡಲಾಗುವುದು ಎಂದರು. ಹಾಗೆ ಈಗಾಗಲೇ ಕೆಲವು ಸಬ್​​ರಿಜಿಸ್ಟ್ರಾರ್​​ಗಳಿಗೆ ಸಿಸಿಬಿ ಕಚೇರಿಗೆ ಬರುವಂತೆ ನೋಟಿಸ್ ನೀಡಲಾಗಿದೆ. ಆದರೆ ಯಾರು ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಕೆಲವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ವಿಚಾರಣೆಗೆ ಹಾಜರಾಗದಿದ್ದರೆ ಜಾಮೀನು ರದ್ದು ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا