Urdu   /   English   /   Nawayathi

ವೈದ್ಯರ ಮೇಲೆ ಹಲ್ಲೆ ಪ್ರಕರಣ; ನಾಳೆ ರಾಜ್ಯಾದ್ಯಂತ ಒಪಿಡಿ ಬಂದ್

share with us

ಬೆಂಗಳೂರು: 07 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಿಂಟೊ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಇದನ್ನು ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶುಕ್ರವಾರ ರಾಜ್ಯಾದ್ಯಂತ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್‌ ಮಾಡಿ ಪ್ರತಿಭಟಿಸಲು ವೈದ್ಯರು ನಿರ್ಧರಿಸಿದ್ದಾರೆ. ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ), ಫನಾ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆ ಬೆಂಬಲ ಸೂಚಿಸಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ಗಂಟೆವರೆಗೂ ಒಪಿಡಿ ಬಂದ್ ಮಾಡಲು ಐಎಂಎ ಕರೆ ನೀಡಿದೆ. ಹಾಗಾಗಿ ಅಗತ್ಯ ತುರ್ತು ಸೇವೆಗಳು ಮಾತ್ರ ದೊರೆಯಲಿವೆ. ಪ್ರತಿಭಟನೆ ಸಂಬಂಧ ಮಾತನಾಡಿದ ಐಎಂಎ ಕಾರ್ಯದರ್ಶಿ ಡಾ.ಶ್ರೀನಿವಾಸ್, ನಾಳೆ ಬೆಳಗ್ಗೆ 6 ರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಒಪಿಡಿಗಳು ಬಂದ್ ಇರಲಿದೆ. ನಮ್ಮ ಬೇಡಿಕೆಗಳು ಈಡೇರಿಲ್ಲ. ಹಾಗಾಗಿ ನಾವೀಗಾಗಲೇ ಹೇಳಿದಂತೆ ಶುಕ್ರವಾರದವರೆಗೆ ಸರ್ಕಾರಕ್ಕೆ ಸಮಯ ನೀಡುತ್ತೇವೆ. ಅಲ್ಲಿಗೂ ಬೇಡಿಕೆ ಈಡೇರಿಲ್ಲವಾದರೆ ರಾಜ್ಯಾದ್ಯಂತ ಒಪಿಡಿ ಬಂದ್ ಮಾಡುತ್ತೇವೆ ಎಂದರು. ರಾಜ್ಯದಲ್ಲಿರುವ 23 ಸಾವಿರ ಖಾಸಗಿ ಆಸ್ಪತ್ರೆಗಳು ಹಾಗೂ ಬೆಂಗಳೂರಿನ 5 ಸಾವಿರಕ್ಕೂ ಹೆಚ್ಚು ಆಸ್ಪತ್ರೆ ಬಂದ್ ಆಗಲಿದೆ."ಜನರಿಗೆ ಬುದ್ದಿ ಕಲಿಸುವುದಕ್ಕೆ ನಾವು ಬಂದ್ ಮಾಡುತ್ತಿದ್ದೇವೆ, ವೈದ್ಯರ ಮೇಲೆ ಹಲ್ಲೆ ನಡೆದರೆ ಜನರೇಕೆ ಸುಮ್ಮನಿರುತ್ತಾರೆ? ಜನರು ನಮ್ಮ ಬೆಂಬಲಕ್ಕೆ ಬಂದರೆ ಇಂತಹಾ ಘಟನೆ ನಡೆಯುವುದಿಲ್ಲ"  ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಚಲಪತಿ ಮಾದ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا