Urdu   /   English   /   Nawayathi

ಸೈನೈಡ್ ಮಿಶ್ರಿತ 'ಪ್ರಸಾದ' ನೀಡಿ 10 ಜನರನ್ನು ಕೊಂದಿದ್ದ ಆರೋಪಿ ಬಂಧನ

share with us

ಏಲೂರು(ಆಂಧ್ರಪ್ರದೇಶ): 06 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸೈನೈಡ್ ಮಿಶ್ರಿತ ಪ್ರಸಾದ ನೀಡಿ ಕಳೆದ 20 ತಿಂಗಳೊಳಗೆ 10 ಜನರನ್ನು ಕೊಲೆ ಮಾಡಿದ ಆರೋಪಿಯನ್ನು ಪೋಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕೊಲೆ ಆರೋಪಿ ವೆಲ್ಲಂಕಿ ಸಿಂಹಾದ್ರಿ ಎಂಬುವವರನ್ನು ಏಲೂರು ಪೋಲೀಸರು ಬಂಧಿಸಿದ್ದು ಆತನಿಗೆ ಸೈನೈಡ್ ಸರಬರಾಜು ಮಾಡುತ್ತಿದ್ದ ವಿಜಯವಾಡದ ಶೇಕ್ ಅಮೀನುಲ್ಲಾ ಎಂಬಾತನನ್ನು ಸಹ ಪೋಲೀಸರು ಬಂಧಿಸಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟಪುರಂ ಗ್ರಾಮದವನಾದ ಸಿಂಹಾದ್ರಿ  ಫೆಬ್ರವರಿ 2018-ಅಕ್ಟೋಬರ್ 2019 ರ ನಡುವೆ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಮತ್ತು ಕೃಷ್ಣ ಜಿಲ್ಲೆಗಳಲ್ಲಿ ನಡೆದ ಹತ್ಯೆಗಳ ಪ್ರಧಾನ ಆರೋಪಿಯಾಗಿದ್ದಾನೆ."ಸಿಂಹಾದ್ರಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಂಆಡುತ್ತಿದ್ದ.  ಅವನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ ಹೊಂದಿದ್ದ. ಆಗ ಆತನು  ಅಲೌಕಿಕ ಶಕ್ತಿಯನ್ನು ಹೊಂದಿದ್ದೇನೆಂದು ನಂಬಿಸಿ ಜನರಿಗೆ ಮೋಸ ಮಾಡಲು ಪ್ರಾರಂಭಿಸಿದ್ದಾನೆ. ಗುಪ್ತವಾದ ನಿಧಿಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವ ನೆಪದಲ್ಲಿ ಜನರನ್ನು ಸಂಪರ್ಕಿಸಿ ವಿಶೇಷ ಪೂಜೆಗಳನ್ನು ಮಾಡಿಸಿ ಸಮಸ್ಯೆಗಳನ್ನು ತೊಡೆದು ಹಾಕಲು  ಅಥವಾ ದೀರ್ಘಕಾಲೀನ ಕಾಯಿಲೆಗಳನ್ನು ಗುಣಪಡಿಸುವ ಔಷಧಿ ಒದಗಿಸುವುದಾಗಿ ಹೇಳಿ ಜನರನ್ನು ವಂಚಿಸಿದ್ದ"ಪಶ್ಚಿಮ ಗೋದಾವರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನವದೀಪ್ ಸಿಂಗ್ ಗ್ರೆವಾಲ್  ವಿವರಿಸಿದ್ದಾರೆ. "ಅವನ ಮಾತಿಗೆ ಮರುಳಾದ ಜನರು ರು ಅಪಾರ ಪ್ರಮಾಣದ ನಗದು ಮತ್ತು ಚಿನ್ನದೊಂದಿಗೆ ಅವರನ್ನು ಭೇಟಿ ಮಾಡುತ್ತಿದ್ದರು. ಸಂತ್ರಸ್ಥರನ್ನು  ಸಂಪೂರ್ಣವಾಗಿ ನಂಬಿಸಿದ ನಂತರ ಸಿಂಹಾದ್ರಿ ಅವರಿಗೆ ಸೈನೈಡ್ ಲೇಪಿತ ಪ್ರಸಾದವನ್ನು ನೀಡುತ್ತಿದ್ದ. ಪ್ರಸಾದವನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಸಾವನ್ನಪ್ಪುತ್ತಾರೆ.ಸಿಂಹಾದ್ರಿ ತಪ್ಪಿಸಿಕೊಳ್ಳುತ್ತಾನೆ.ಸಂಸ್ತ್ರಸ್ಥರ ಬಳಿಯಿದ್ದ ಹಣ,  ಚಿನ್ನವನ್ನು ಲೂಟಿ ಮಾಡಲು ಸಿಂಹಾದ್ರಿ ಈ ಯೋಜನೆ ರೂಪಿಸಿದ್ದ."

ಸಿಂಹಾದ್ರಿ ತನ್ನ ಈ ದುರಾಶೆಗೆ ತನ್ನ ಸ್ವಂತ ಸಂಬಂಧಿಕರನ್ನೂ ಬಲಿ ಪಡೆದಿದ್ದಾನೆ. "ಮಧುಮೇಹಕ್ಕೆ ಔಷಧಿ ನೀಡುವ ನೆಪದಲ್ಲಿ ಅವನು ತನ್ನ ಅಜ್ಜಿಯನ್ನು ಕೊಂದನು ಮತ್ತು ನಂತರ ಅವನು ಮೂರು ಸವರನ್ ನ್ನವನ್ನು ಲೂಟಿ ಮಾಡಿದನು ಅತ್ತಿಗೆಯನ್ನು ಆಕೆಯ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ  ಮತ್ತು ಆಕೆಯ ಕೊಂದನು. ಅವನು 5 ಲಕ್ಷ ರೂ ಮತ್ತು 20 ಸವರನ್ ಚಿನ್ನವನ್ನು ಲೂಟಿಗೈದನು. ಕಡೆಗೆ ದೈಹಿಕ ಶಿಕ್ಷಕ  ಕೆ.ನಗರಾಜು ಅವರನ್ನು ಕೊಂದು ಆತ ಸಿಕ್ಕಿಬಿದ್ದಿದ್ದಾನೆ. ಸಿಂಹಾದ್ರಿ ಅಗ್ಗದ ಬೆಲೆಗೆ ಅಲೌಕಿಕ ಶಕ್ತಿಯ ನಾಣ್ಯ ನೀಡುವ ಮೂಲಕ ನಾಗರಾಜುವನ್ನು ವಂಚನೆಯ ಜಾಲದಲ್ಲಿ ಸಿಕ್ಕಿಸಿದ್ದ. ಅಕ್ಟೋಬರ್ 16 ರಂದು ಸಿಂಹಾದ್ರಿ ವಟ್ಲೂರು ಬಳಿ ನಾಗರಾಜುಗೆ ವಿಷವನ್ನು ಕೊಟ್ಟು 2 ಲಕ್ಷ ರೂ ಮತ್ತು ನಾಲ್ಕು ಚಿನ್ನದ ಆಭರಣಗಳನ್ನು ಲೂಟಿ ಮಾಡಿದ. ಆದರೆ ನಾಗರಾಜು ಸಾಯುವುದಕ್ಕೆ ಮುನ್ನ ಸ್ಥಳೀಯರು ಅವರನ್ನು  ಆಸ್ಪತ್ರೆಗೆ ಕರೆದೊಯ್ದರು  ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾರೆ. ನಾಗರಾಜು ಅವರ ಕುಟುಂಬ ನಾಗರಾಜು ಅವರ ಬಳಿ ಇದ್ದ ಚಿನ್ನ ಹಾಗೂ ನಗದು ಕಾಣೆಯಾಗಿರುವ ಬಗೆಗೆ ಪೋಲೀಸರಿಗೆ ದೂರಿತ್ತಿದ್ದಾರೆ.ಕೊಲೆ ಪ್ರಕರಣಗಳ ತನಿಖೆಯ ಸಮಯದಲ್ಲಿ ಸಿಂಹಾದ್ರಿ  ಕಾಲ್ ಡೇಟಾ ಮತ್ತು ಕಾಲ್ ಟವರ್ ಸಿಗ್ನಲ್ ಡೇಟಾವನ್ನು ವಿಶ್ಲೇಷಿಸಿದ ನಂತರ ಏಲೂರು ಪೋಲೀಸರು ಆರೋಪಿಯನ್ನು ಪತ್ತೆ ಂಆಡಿದ್ದಾರೆ.10 ಕೊಲೆ ಪ್ರಕರಣಗಳಲ್ಲಿ ಕೇವಲ ನಾಲ್ಕು ಪ್ರಕರಣಗಳು  ಮಾತ್ರ ದಾಖಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا