Urdu   /   English   /   Nawayathi

ದೆಹಲಿ ಮಾಲಿನ್ಯ: ಅಧಿಕಾರದಲ್ಲಿರಲು ನಿಮಗೆ ಯಾವುದೇ ಹಕ್ಕಿಲ್ಲ - ರಾಜ್ಯ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

share with us

ನವದೆಹಲಿ: 06 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್, ನಿಮಗೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದು ಕೋಟ್ಯಾಂತರ ಜನರ ಸಾವು, ಬದುಕಿನ ಪ್ರಶ್ನೆ. ಈ ಮಾಲಿನ್ಯದಿಂದಾಗಿ ಜನ ಸಾಯಲು ನೀವು ಅವಕಾಶ ನೀಡುತ್ತೀರಾ? ದೇಶವನ್ನು 100 ವರ್ಷ ಹಿಂದಕ್ಕೆ ತಳ್ಳುತ್ತೀರಾ? ಇಂತಹ ಪರಿಸ್ಥಿತಿಗೆ ನಾವು ಸರ್ಕಾರಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಎಚ್ಚರಿಸಿದೆ. ಕೃಷಿ ತ್ಯಾಜ್ಯವನ್ನು ಸುಡುವ ಚಟುವಟಿಕೆಯನ್ನು ನಿಯಂತ್ರಿಸಲು ಸರ್ಕಾರಗಳಿಂದ ಏಕೆ ಸಾಧ್ಯವಾಗುತ್ತಿಲ್ಲ? ಎಂದು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೋರ್ಟ್, ಜನರ ಬಗ್ಗೆ ನಿಮಗೆ ಕಾಳಜಿ ಇಲ್ಲದಿದ್ದರೆ, ನಿಮಗೆ ಅಧಿಕಾರದಲ್ಲಿ ಮುಂದುವರೆಯುವ ಹಕ್ಕು ಇಲ್ಲ ಎಂದಿದೆ. ಕಲ್ಯಾಣ ಸರ್ಕಾರದ ಪರಿಕಲ್ಪನೆಯನ್ನು ನೀವು ಮರೆತಿದ್ದೀರಿ. ನಿಮಗೆ ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದು ಅತ್ಯಂತ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದು ಪ್ರಾಜಾಪ್ರಭುತ್ವದಿಂದ ಆಯ್ಕೆಯಾದ ಸರ್ಕಾರಗಳ ಹೊಣೆ ಹಾಗೂ ಇದನ್ನು ಕ್ರಮ ಬದ್ಧವಾಗಿ ನೋಡಿಕೊಳ್ಳಬೇಕಿದೆ ಎಂದು ಕೋರ್ಟ್ ಹೇಳಿದೆ. ಹೊಲಗಳಲ್ಲಿರುವ ತ್ಯಾಜ್ಯಗಳಿಗೆ ಬೆಂಕಿ ನೀಡುವುದು ಯೋಜಿತ ಹಾಗೂ ಸಂಘಟಿತ ಪಾಪವಾಗಿದೆ. ಪ್ರತಿ ವರ್ಷವೂ ಈ ಚಟುವಟಿಕೆ ಸರಾಗವಾಗಿ ಸಾಗಿದೆ. ಪ್ರತಿ ವರ್ಷವೂ ದಿಲ್ಲಿಯಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತದೆ. ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಪ್ರದೇಶ ಸರಕಾರಗಳು ಈ ನಿಟ್ಟಿನಲ್ಲಿ ಸರಿಯಾದ ದಾರಿ ಕಂಡುಕೊಂಡು, ಏಳು ದಿನಗಳ ಒಳಗಾಗಿ ಕ್ರಮ ಜರುಗಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا