Urdu   /   English   /   Nawayathi

ಅಕ್ರಮ ರೈಲ್ವೆ ಟಿಕೆಟ್ ಮಾರಾಟ ಜಾಲ ಪತ್ತೆ

share with us

ಕಾರವಾರ: 05 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಅಕ್ರಮ ರೈಲ್ವೆ ಟಿಕೆಟ್ ಮಾರಾಟ ಜಾಲ ಪತ್ತೆಯಾಗಿದೆ. ಕಾನೂನು ಬಾಹಿರವಾಗಿ ರೈಲ್ವೆ ಟಿಕೆಟ್​ನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಗ್ರೀನ್ ಸ್ಟ್ರೀಟ್​ನ ಫಾಸ್ಟ್ ಟ್ರಾವೆಲ್ಸ್​ನ ಮಾಲೀಕ ಅಬ್ದುಲ್ ನಸೀರ್ ಇಬ್ರಾಹಿಂ ಶೇಖ್ ಎಂಬಾತನನ್ನು ರೈಲ್ವೆ ರಕ್ಷಣಾ ದಳ(ಆರ್​ಪಿಎಫ್)ದ ಅಧಿಕಾರಿಗಳು ಅ.29ರಂದು ವಶಕ್ಕೆ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆತನಿಂದ ಮುಂದಿನ ವಿವಿಧ ದಿನಾಂಕಗಳ 20 ಟಿಕೆಟ್​ಗಳು ಹಾಗೂ ಹಿಂದಿನ ದಿನಾಂಕಗಳ 13 ಟಿಕೆಟ್​ಗಳು, ಕಂಪ್ಯೂಟರ್, 1020 ರೂ. ನಗದು ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ 5 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಅಕ್ರಮ ಹೇಗೆ..? ಭಾರತೀಯ ರೈಲ್ವೆಯ ಇ ಟಿಕೆಟ್ ಬುಕಿಂಗ್ ವ್ಯವಸ್ಥೆ ಐಆರ್​ಟಿಸಿಯಲ್ಲಿ ವಿವಿಧ ನಕಲಿ ಹೆಸರಿನಲ್ಲಿ ಖಾತೆ ತೆರೆದು ಸೀಟ್​ಗಳನ್ನು ಬುಕ್ ಮಾಡಿ ಇಡಲಾಗುತ್ತಿತ್ತು. ಟಿಕೆಟ್ ಕೇಳಿ ಬರುವ ಪ್ರಯಾಣಿಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಕೇಂದ್ರ ಕಚೇರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲು ಸ್ಥಳೀಯ ಆರ್​ಪಿಎಫ್ ಅಧಿಕಾರಿಗೆ ಸೂಚನೆ ಬಂದಿತ್ತು. ಅದರಂತೆ ದಾಳಿ ನಡೆಸಿದಾಗ ಸಾಕಷ್ಟು ಟಿಕೆಟ್​ಗಳು ಪತ್ತೆಯಾದವು. ನಕಲಿ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡುವುದು ರೈಲ್ವೆ ಕಾಯ್ದೆ 143ರ ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದ 20 ಟಿಕೆಟ್​ಗಳನ್ನು ರದ್ದು ಮಾಡಲಾಗಿದೆ. ಅಕ್ರಮ ಎಸಗುತ್ತಿದ್ದ ವಿವಿಧ ಯೂಸರ್ ಐಡಿಗಳನ್ನು ತಡೆ ಹಿಡಿಯಲು ಐಆರ್​ಟಿಸಿಗೆ ಪತ್ರ ಬರೆಯಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا