Urdu   /   English   /   Nawayathi

ಮಹಾಬಿಕ್ಕಟ್ಟು: ಮಾರುಕಟ್ಟೆಗೆ 50-50 ಹೆಸರಿನ ಹೊಸ ಬಿಸ್ಕತ್ತು ಬಂದಿದೆಯೇ ? ಓವೈಸಿ ವ್ಯಂಗ್ಯ

share with us

ಹೈದರಬಾದ್: 03 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವಿನ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ  ಮಾರುಕಟ್ಟೆಯಲ್ಲಿ 50-50 ಹೆಸರಿನ ಹೊಸ ಬಿಸ್ಕತ್ತು ಏನಾದರೂ ಬಂದಿದೆಯೇ ಎಂದು ವ್ಯಂಗ್ಯವಾಡಿದ್ದಾರೆ. ಎಐಎಂಐಎಂ ತನ್ನ ಬೆಂಬಲವನ್ನು ಬಿಜೆಪಿ ಅಥವಾ ಶಿವಸೇನೆಗೆ ನೀಡುವುದಿಲ್ಲಎಂಬ ತಮ್ಮ ನಿಲುವನ್ನುಇದೇ ವೇಳೆ ಸ್ಪಷ್ಟ ಪಡಿಸಿದರು. ಸರ್ಕಾರ ರಚನೆ ಕಗ್ಗಂಟನ್ನು ಉಲ್ಲೇಖಿಸಿ, 50-50 ಎಂದರೇನು? ಆ ಹೆಸರಿನ ಹೊಸ ಬಿಸ್ಕತ್ತು ಬಂದಿದೆಯೇ? ನೀವೆಷ್ಟು 50-50 ಮಾಡುತ್ತೀರಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಜನರು ಸತಾರದಲ್ಲಿ ಮಳೆಯಿಂದಾದ ಅನಾಹುತದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಬದಲಿಗೆ 50-50 ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ನನಗೂ ಕೂಡ ಫಡ್ನವೀಸ್ ಅಥವಾ ಬೇರಾರದರೂ ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ತಿಳಿದಿಲ್ಲ. ರಾಜ್ಯದಲ್ಲಿ ಮ್ಯೂಸಿಕ್ ಚೇರ್ ಆಟ ಮುಂದುವರಿಯುತ್ತಿದೆ. ಶಿವಸೇನೆಗೂ ಕೂಡ ಏನು ಮಾಡಬೇಕೆಂದು ಸ್ಪಷ್ಟತೆಯಿಲ್ಲ. ಉದ್ಧವ್ ಠಾಕ್ರೆ ಪ್ರಧಾನಿ ಮೋದಿಗೆ ಹೆದರುವಂತೆ ತೋರುತ್ತಿದೆ ಎಂದರು. ಮಹಾರಾಷ್ಟ್ಟ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಎರಡು ಸ್ಥಾನಗಳನ್ನು ಗೆದ್ದಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا