Urdu   /   English   /   Nawayathi

ಪಿಎಂ ಮೋದಿ-ಇಂಡೋನೇಷಿಯಾ ಅಧ್ಯಕ್ಷರ ಭೇಟಿ: ವ್ಯಾಪಾರ ಸಹಭಾಗಿತ್ವ, ಉಗ್ರನಿಗ್ರಹ ಬಗೆಗೆ ಚರ್ಚೆ

share with us

ಬ್ಯಾಂಕಾಕ್: 03 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷಿಯಾ ಅಧ್ಯಕ್ಷ ಜೋಕೊ ವಿಡೋಡೋ ಅವರೊಂದಿಗೆ ಭಾನುವಾರ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಉಭಯ ನಾಯಕರು ಭಯೋತ್ಪಾದನೆ ಮತ್ತು ಉಗ್ರವಾದದ ಬೆದರಿಕೆಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಇಬ್ಬರೂ ನಾಯಕರು ಥಾಯ್ ಲ್ಯಾಂಡಿನಲ್ಲಿ ನಡೆದ ಆಸಿಯಾನ್ ಶೃಂಗಸಭೆಯಹಿನ್ನೆಲೆಯಲ್ಲಿ ಮುಖಾಮುಖಿಯಾಗಿದ್ದಾರೆ. ಭಾರತ ಮತ್ತು ಇಂಡೋನೇಷಿಯಾ ಸಮುದ್ರ ತೀರದ ನೆರೆಹೊರೆ ರಾಷ್ಟ್ರಗಳಾಗಿದ್ದು ಉಭಯ ನಾಯಕರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.ಇಂಡೋನೇಷಿಯಾದ ಅಧ್ಯಕ್ಷರಾಗಿ ವಿಡೋಡೊ ಅವರ ಎರಡನೇ ಅವಧಿ ಪ್ರಾರಂಬಗೊಂಡಿದ್ದು ಇದಕ್ಕಾಗಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಬಹುಮತದ ಸಮಾಜಗಳಾಗಿ, ರಕ್ಷಣೆ, ಭದ್ರತೆ, ಸಂಪರ್ಕ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸಲು ಇಂಡೋನೇಷಿಯಾದೊಡನೆ ವ್ಯಾಪಾರ ಮತ್ತು ಹೂಡಿಕೆಗೆ ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿಯವರು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಕುರಿತುಚರ್ಚಿಸಿದ್ದಲ್ಲದೆ ವಾಹನ ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ಭಾರತೀಯ ಸರಕುಗಳಿಗೆ ಹೆಚ್ಚಿನ ಮಾರುಕಟ್ಟಯ ಅಗತ್ಯವನ್ನು ಎತ್ತಿ ತೋರಿಸಿದರು.ಭಾರತೀಯ ಕಂಪನಿಗಳು ಇಂಡೋನೇಷಿಯಾದಲ್ಲಿ ಸಾಕಷ್ಟು ಹೂಡಿಕೆ ಮಾಡಿರುವುದನ್ನು ಒತ್ತಿ ಹೇಳಿದ ಪ್ರಧಾನಿ ಇಂಡೋನೇಷಿಯಾದ ಕಂಪನಿಗಳನ್ನು ಭಾರತದಲ್ಲಿ ಹೂಡಿಕೆಗೆ ಆಹ್ವಾನಿಸಿದ್ದಾರೆ. ಮಾತ್ರವಲ್ಲದೆ ಮುಂದಿನ ವರ್ಷ ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅಧ್ಯಕ್ಷ ಜೊಕೊವಿ ಅವರನ್ನು ಆಹ್ವಾನಿಸಿದ್ದಾರೆ. "ಇಂಡೋನೇಷಿಯಾದೊಂದಿಗಿನ ತನ್ನ ದ್ವಿಪಕ್ಷೀಯ ಸಂಬಂಧಕ್ಕೆ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ, ಇದರೊಂದಿಗೆ ನಾವು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಹಂಚಿಕೊಳ್ಳುತ್ತೇವೆ" ಎಂದು ಹೇಳಿಕೆ ತಿಳಿಸಿದೆ. ಈ ವರ್ಷ ಭಾರತ ಮತ್ತು ಇಂಡೋನೇಷಿಯಾ  ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವರ್ಷಾಚರಣೆಯನ್ನು ಆಚರಿಸುತ್ತಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا