Urdu   /   English   /   Nawayathi

ದೆಹಲಿ ಏರ್ಪೋರ್ಟ್ ನಲ್ಲಿ ಪತ್ತೆಯಾದ ಬ್ಯಾಗ್ ನಲ್ಲಿ ಆರ್ ಡಿಎಕ್ಸ್ ಇರಲಿಲ್ಲ: ಬ್ಯಾಗ್ ಮಾಲಿಕನಿಗೆ ಕ್ಲೀನ್ ಚಿಟ್ ಇಲ್ಲ!

share with us

ನವದೆಹಲಿ: 02 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ದೆಹಲಿ ವಿಮಾನನಿಲ್ದಾಣದಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿದ್ದ ಬ್ಯಾಗ್ ನಲ್ಲಿ ಆರ್ ಡಿಎಕ್ಸ್ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಉಪೇಕ್ಷಿತ ಬ್ಯಾಗ್ನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ತಪಾಸಣೆ ನಡೆಸಿದ್ದು, ಅದರಲ್ಲಿ ಆರ್ ಡಿಎಕ್ಸ್ ಇರುವುದು ಪತ್ತೆಯಾಗಿಲ್ಲ. ಬದಲಾಗಿ ಅದರಲ್ಲಿ ಆಟಿಕೆಗಳು, ಚಾರ್ಜರ್ ಗಳು, ಚಾಕೊಲೇಟ್ಗಳು, ಡ್ರೈ ಫ್ರೂಟ್ಸ್ಗಳಿದ್ದವು. ಬ್ಯಾಗ್ ನ ಶಹೀದ್ ಖಾನ್ ಮಾಲಿಕ ಪತ್ತೆಯಾಗಿದ್ದು, ಹರ್ಯಾಣದ ನಿವಾಸಿ ಎಂದು ತಿಳಿದುಬಂದಿದೆ. ಮುಂಬೈ ನಿಂದ ದೆಹಲಿಗೆ ಸ್ನೇಹಿತರೊಂದಿಗೆ ಆಗಮಿಸಿದ್ದಾಗ ಮರೆತು ಈ ಬ್ಯಾಗ್ನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದರು. ಈಗ ಬ್ಯಾಗ್ ಮಾಲಿಕರನ್ನು ಪತ್ತೆಯಹಚ್ಚಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا