Urdu   /   English   /   Nawayathi

ಸಿಂಗಲ್​ ಚಿಪ್​ನಲ್ಲಿ ಸೋಂಕು ಪೀಡಿತ ಸಾವಿರಾರು ಏಕ ಕೋಶಗಳ ಮೌಲ್ಯಮಾಪನ..!

share with us

ಪೆನ್ಸಿಲ್ವೇನಿಯಾ: 02 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) 'ಲ್ಯಾಬ್ ಆನ್ಎ ಚಿಪ್' (lab-on-a-chip) ಎಂಬ ಸಾಧನವು ವೈರಸ್ ಸೋಂಕಿಗೆ ಒಳಗಾದ ಸಾವಿರಾರು ಏಕ ಕೋಶಗಳನ್ನು ಒಂದೇ ಬಾರಿ ವೀಕ್ಷಿಸಲು ಸಂಶೋಧಕರಿಗೆ ಅನುವು ಮಾಡಿಕೊಡಲಿದೆ. ಪೆನ್ ಸ್ಟೇಟ್ ಮತ್ತು ಆಸ್ಟಿನ್​ನ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಸೋಂಕಿನ ಚಲನಶಾಸ್ತ್ರದ ಬಗ್ಗೆ ಅಧ್ಯಯನ ಮಾಡುತ್ತಿದೆ. ಹಳೆ ಆವೃತ್ತಿಯ ಮೈಕ್ರೋಫ್ಲೂಯಿಡ್​​ ಸಾಧನವನ್ನು ಇನ್ನಷ್ಟು ಅಧಿವೃದ್ಧಿ ಪಡಿಸಿ, ಒಂದೇ ಸಮಯದಲ್ಲಿ ಸೋಂಕು ಪೀಡಿತ ಸಾವಿರಾರು ಏಕ ಕೋಶಗಳನ್ನು ವೀಕ್ಷಿಸುವಂತಹ ಸಾಧನವನ್ನು ಇನ್ನಷ್ಟು ಸುಧಾರಣೆ ಪಡಿಸಿದ್ದಾರೆ. ಇದೊಂದು ಪ್ರಯಾಸಕರ ವಿಧಾನ ವಾಗಿದ್ದು, ಚಿಕ್ಕ- ಚಿಕ್ಕ ಸಾವಿರಾರು ಸಿಂಗಲ್​ ಸೆಲ್​ಗಳನ್ನು ಔಷಧ ತಪಾಸಣೆಗೆ ನೆರವಾಗಲಿದೆ. ಈ ಸಾಧನವು ಆಂಟಿವೈರಲ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ವೈರಸ್ ಪ್ರತಿರೋಧವನ್ನು ಉಂಟುಮಾಡುವ ಸಾಧ್ಯತೆ. ವೈರಸ್ ಪುನರಾವರ್ತಿಸಲು ಆರಂಭಿಸಿದಾಗ, ಅದು ಎಷ್ಟು ಬೇಗನೆ ಪುನರಾವರ್ತನೆಯಾಯಿತು. ಗರಿಷ್ಠ ಪ್ರಮಾಣದ ವೈರಸ್ ಬೆಳವಣಿಗೆ ಅವಧಿ ಎಷ್ಟು ಎಂಬುದನ್ನು ಕಂಡುಕೊಳ್ಳುವಂತಹ ಸೂಕ್ಷ್ಮವಾದ ಮಾಹಿತಿ ಒದಗಿಸುತ್ತದೆ ಎಂಬ ವಿವರವಾದ ವರದಿಯನ್ನ ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಸೋಂಕಿತ ಕೋಶಗಳ ಮೇಲೆ ಆ್ಯಂಟಿವೈರಲ್‌ನ ಪರಿಣಾಮವನ್ನು ಅಧ್ಯಯನ ಮಾಡುವ ಸಾಂಪ್ರದಾಯಿಕ ವಿಧಾನಗಳು ಅನೇಕ ಸೋಂಕಿತ ಕೋಶಗಳು ವ್ಯಕ್ತಿಗಳ ಮೇಲೆ ಕೇಂದ್ರೀಕರಿಸಲಾಯಿತು ಎಂದು ಸಂಶೋಧನಾ ತಂಡದ ಜೀವರಾಸಾಯನಿಕ ಮತ್ತು ಆಣ್ವಿಕ ಜೀವಶಾಸ್ತ್ರದ ಪ್ರಾಧ್ಯಾಪಕ ಕ್ರೇಗ್ ಕ್ಯಾಮರೂನ್ ಹೇಳಿದರು. ಜನಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಆಂಟಿವೈರಲ್ ಅನ್ನು ಅನ್ವಯಿಸಿದಾಗ, ಎಷ್ಟು ಸೋಂಕಿತ ಕೋಶಗಳನ್ನು ಕೊಲ್ಲಲಾಗುತ್ತದೆ ಮತ್ತು ಆ್ಯಂಟಿವೈರಲ್​ನ ಪರಿಣಾಮಕಾರ ಏನು ಎಂಬುದನ್ನು ಕಂಡುಕೊಳ್ಳಬಹುದು. ಒಂದೊಂದು ಕೋಶಗಳು ಔಷಧಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು. ಇದು ಸೋಂಕಿನ ಫಲಿತಾಂಶ ಮತ್ತು ಔಷಧ ನಿರೋಧಕತೆ ಮೇಲೆ ಹೇಗೆ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಸಹ ಅರ್ಥೈಸಿಕೊಳ್ಳಬಹುದು. ಈ ಹಿಂದೆ ಪ್ರತ್ಯೇಕ ಸೋಂಕಿತ ಕೋಶಗಳ ಅಧ್ಯಯನ ಮಾಡುವ ವಿಧಾನ ಅಭಿವೃದ್ಧಿಪಡಿಸಿದ್ದೆವು. ಈಗ ಒಂದೇ ಸಮಯದಲ್ಲಿ ಸಾವಿರಾರು ಏಕ ಕೋಶಗಳನ್ನು ಅಧ್ಯಯನ ಮಾಡುವ ತಂತ್ರ ಅಳವಡಿಸಿಕೊಂಡಿದ್ದೇವೆ ಎಂದರು. ಈ ಏಕ ಕೋಶ ವಿಧಾನವು ಆಂಟಿವೈರಲ್‌ಗಳ ಸಂಯೋಜನೆಯನ್ನು ಅಧ್ಯಯನ ಮಾಡಲು ನೆರವಾಗಲಿದ್ದು, ಸೋಂಕು ಕೊಲ್ಲುವ ಪ್ರಮಾಣವನ್ನು ಹೊರತುಪಡಿಸಿ ಇತರ ಪರಿಣಾಮಗಳನ್ನು ಇದರಿಂದ ಸುಲಭವಾಗಿ ನೋಡಬಹುದು. ಈ ಸಾಧನವು ಪ್ರಸ್ತುತ ತಯಾರಿಸಲು ಸವಾಲಿನ ಕೆಲಸವಾಗಿದೆ. ಇದನ್ನು ಹೆಚ್ಚು ಸುಲಭವಾಗಿ ತಯಾರಿಸಿ ಬಳಕೆಗೆ ಕ್ಲಿಷ್ಟವಾಗದ ಮಾದರಿಯಲ್ಲಿ ಇರಬೇಕು ಎಂಬುದು ನಮ್ಮ ಉದ್ದೇಶ ಎಂದು ಕ್ಯಾಮರೂನ್ ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا