Urdu   /   English   /   Nawayathi

ಜಸ್ಟ್ 30 ವರ್ಷದಲ್ಲಿ ವಾಣಿಜ್ಯ ನಗರಿ ವಿಶ್ವಭೂಪಟದಿಂದಲೇ ಕಣ್ಮರೆ..!

share with us

ನ್ಯೂಯಾರ್ಕ್/ನವದೆಹಲಿ: 31 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಆತಂಕದ ಮಧ್ಯೆಯೇ ಭಾರತೀಯರು ಸೇರಿದಂತೆ ವಿಶ್ವದ ನಾನಾ ಭಾಗದ ಜನತೆ ಭಯಬೀಳುವ ವರದಿಯೊಂದು ಹೊರಬಿದ್ದಿದೆ. ವರದಿಯ ಪ್ರಕಾರ 2050ರ ವೇಳೆಗೆ ಅಂದರೆ ಹೆಚ್ಚು ಕಡಿಮೆ ಇನ್ನು 30 ವರ್ಷದಲ್ಲಿ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ವಿಶ್ವದ ಹಲವು ನಗರಗಳು ವಿಶ್ವಭೂಪಟದಿಂದ ಕಣ್ಮರೆಯಾಗಲಿವೆ. ಈ ಹಿಂದಿನ ಅಂದಾಜಿಗಿಂತಲೂ ಮೂರು ಪಟ್ಟು ವೇಗವಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಪರಿಣಾಮ ಕರಾವಳಿ ಭಾಗದಲ್ಲಿರುವ ನಗರಗಳನ್ನು ಸಮುದ್ರಗಳು ಸಂಪೂರ್ಣವಾಗಿ ಮುಚ್ಚಿಹಾಕಲಿವೆ ಎಂದು ಅಮೆರಿಕದ 'ನೇಚರ್ ಕಮ್ಯುನಿಕೇಶನ್ಸ್' ಪತ್ರಿಕೆಯಲ್ಲಿ ಬಿಡುಗಡೆ ಅಧ್ಯಯನ ವರದಿ ಪ್ರಕಟವಾಗಿದೆ. ಅಮೆರಿಕ ಕ್ಲೈಮೇಟ್ ಸೆಂಟ್ರಲ್​​ ಸಂಸ್ಥೆಯ ಅಧ್ಯಯನ ತಂಡ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ನಡೆಸಿದ ವರದಿ ಸದ್ಯ ನೇಚರ್ ಕಮ್ಯುನಿಕೇಷನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವರದಿ ಸದ್ಯ ಭಾರತದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಮುಂಬೈ ಜೊತೆಗೆ ಕೋಲ್ಕತ್ತಾ ಸಹ ಈ ಅಪಾಯದಲ್ಲಿದ ಎಂದು ವರದಿ ಹೇಳಿದೆ. ಜಾಗತಿಕಮಟ್ಟದಲ್ಲಿ ಬ್ಯಾಂಕಾಕ್​, ಶಾಂಘೈ, ಅಲೆಕ್ಸಾಂಡ್ರಿಯಾ ಹಾಗೂ ಆಮ್​ಸ್ಟರ್​ಟ್ಯಾಮ್, ದಕ್ಷಿಣ ವಿಯೆಟ್ನಾಂ​ ನಗರಗಳು 2050 ಬಳಿಕ ಭೂಪಟದಿಂದ ಶಾಶ್ವತವಾಗಿ ಮರೆಯಾಗಲಿವೆ ಎನ್ನುವ ಗಂಭೀರ ಸಂಗತಿ ವರದಿಯಲ್ಲಿ ಉಲ್ಲೇಖವಾಗಿದೆ. ಸದ್ಯ ವರದಿಯಲ್ಲಿ ಉಲ್ಲೇಖಿಸಲಾಗಿರುವ ನಗರಗಳಲ್ಲಿ ಸರಿಸುಮಾರು 15 ಕೋಟಿಗೂ ಅಧಿಕ ಮಂದಿ ವಾಸವಿದ್ದು, ವರದಿ ಒಂದು ವೇಳೆ ನಿಜವಾದಲ್ಲಿ 15 ಕೋಟಿ ಮಂದಿ ವಾಸದ ಪ್ರಶ್ನೆಯೂ ಉದ್ಭವಿಸಲಿದೆ. ಹೀಗಾಗಿ ಜಾಗತಿಕ ತಾಪಮಾನದ ಗಂಭೀರತೆ ಪರ್ಯಾಯ ಸ್ಥಳದ ಹುಡುಕಾಟಕ್ಕೂ ದಾರಿಯಾದರೆ ಅಚ್ಚರಿಯಲ್ಲ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا