Urdu   /   English   /   Nawayathi

ವಾಟ್ಸ್​ಆ್ಯಪ್​ಗೆ ತೆರಿಗೆ ವಿಧಿಸಿ ಪ್ರಧಾನಿ ಹುದ್ದೆ ಕಳೆದುಕೊಂಡ... ಯಾವ ದೇಶದ ಪಿಎಂ ಗೊತ್ತೆ?

share with us

ಬೈರುತ್: 30 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಕಳೆದ ಎರಡು ವಾರಗಳಿಂದ ಲೆಬನಾನ್​ ಪ್ರಧಾನಿ ಸಾದ್ ಹ್ಯಾರಿರಿ ಸರ್ಕಾರದ ವಿರುದ್ಧ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಮುಷ್ಕರದ ಕಾವು ತೀವ್ರತೆ ಪಡೆಯುವ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹ್ಯಾರಿರಿ ಘೋಷಿಸಿದ್ದಾರೆ. 'ನಾನು ಇದನ್ನು ನಿಮ್ಮಿಂದ ಮರೆಮಾಚಲು ಸಾಧ್ಯವಿಲ್ಲ. ನಾನು ಕೊನೆಯ ಹಂತ ತಲುಪಿದ್ದೇನೆ. ನನ್ನ ಎಲ್ಲ ರಾಜಕೀಯ ಗೆಳೆಯರಿಗೆ, ಇಂದು ನಮ್ಮ ಜವಾಬ್ದಾರಿಯ ಲೆಬನಾನ್ ಅನ್ನು ಹೇಗೆ ರಕ್ಷಿಸುವುದು ಮತ್ತು ಆರ್ಥಿಕತೆಯನ್ನು ಹೇಗೆ ಉನ್ನತೀಕರಿಸುವುದು. ಇಂದೊಂದು ಗಂಭೀರವಾದ ಅವಕಾಶವಿದೆ. ನಾವು ಅದನ್ನು ವ್ಯರ್ಥ ಮಾಡಬಾರದು' ಎಂದು ಹ್ಯಾರಿರಿ ಹೇಳಿದ್ದಾರೆ. ಹ್ಯಾರಿರಿ ತಮ್ಮ ರಾಜೀನಾಮೆ ಘೋಷಿಸುತ್ತಿದ್ದಂತೆ ಬೈರುತ್‌ನಲ್ಲಿ ಪ್ರತಿಭಟನಾಕಾರರು ಸಂತಸದಿಂದ ಲೆಬನಾನ್​ನ ಧ್ವಜ ಬೀಸಿ ಸಂಭ್ರಮಿಸಿದರು. ಬೈರುತ್‌ನ ಡೌನ್​ಟೌನ್‌ನಲ್ಲಿ ಒಂದು ಗುಂಪು ಪ್ರತಿಭಟನಾ ಸ್ಥಳಕ್ಕೆ ನುಗ್ಗಿ ಆ ಪ್ರದೇಶದಲ್ಲಿ ಬೆಂಕಿ ಹಚ್ಚಿ ಡೇರೆಗಳನ್ನು ಕಿತ್ತುಹಾಕಿತು. ಪ್ರತಿಭಟನಾಕಾರರನ್ನು ನಿಭಾಯಿಸಲು ನಗರದ ವಿವಿಧ ಭಾಗಗಳಲ್ಲಿ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಕ್ಟೋಬರ್ 17ರಂದು ಲೆಬನಾನ್​ನ ಸರ್ಕಾರವು ಕಠಿಣ ಕಾನೂನುಗಳನ್ನು ಜಾರಿಗೆ ತಂದಿತ್ತು. ಇದರಿಂದ ಆಕ್ರೋಶಗೊಂಡ ಜನ ದೇಶಾದ್ಯಂತ ಆಂದೋಲನಗಳನ್ನು ನಡೆಸಿದರು. ಮುಖ್ಯವಾಗಿ ವಾಟ್ಸ್​ಆ್ಯಪ್​ ಕರೆಗಳ ಮೇಲೆ ತೆರಿಗೆ ವಿಧಿಸಲು ಅದು ಪ್ರಸ್ತಾಪಿಸಿತು. ಅತಿರೇಕದ ಭ್ರಷ್ಟಾಚಾರ ಕೊನೆಗೊಳಿಸಬೇಕು. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮುಂದಾಗಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿ ಪ್ರಧಾನಿ ರಾಜೀನಾಮೆಗೆ ಪಟ್ಟುಹಿಡಿದಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا