Urdu   /   English   /   Nawayathi

ಸೌದಿ ಅರೆಬಿಯಾ: ಜೋರ್ಡನ್ ರಾಜನನ್ನು ಭೇಟಿಯಾದ ಮೋದಿ

share with us

ರಿಯಾದ್, ಸೌದಿ ಅರೆಬಿಯಾ: 29 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಸೌದಿ ಅರೆಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜೋರ್ಡನ್ ರಾಜ ಎರಡನೇ ಅಬ್ದುಲ್ಲಾ ಬಿನ್ ಅಲ್–ಹುಸೇನ್ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಮತ್ತು ಜನರಿಂದ ಜನರಿಗೆ ಲಾಭ ದೊರೆಯುವ ಒಪ್ಪಂದಗಳ ಕುರಿತು ಚರ್ಚೆ ನಡೆಸಿದರು. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದು, ‘ಈ ದಿನಕ್ಕೊಂದು ಉತ್ತಮ ಆರಂಭ. ಪ್ರಧಾನಿ ನರೇಂದ್ರ ಮೋದಿ ಅವರು ರಿಯಾದ್ ನಲ್ಲಿ ರಾಜ ಎರಡನೇ ಅಬ್ದುಲ್ಲ ಅವರನ್ನು ಭೇಟಿಯಾದರು’ ಎಂದು ಮಾಹಿತಿ ನೀಡಿದ್ದಾರೆ. “ಉಭಯ ನಾಯಕರು ಅನೇಕ ವಲಯಗಳ, ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಜನರಿಂದ ಜನರಿಗಾಗಿ ಇರುವ ಒಪ್ಪಂದಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಕುರಿತು ಚರ್ಚಿಸಿದರು” ಎಂದು ಅವರು ತಿಳಿಸಿದ್ದಾರೆ. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ಲಾಜಿಜ್ ಅವರ ಅಧಿಕೃತ ಆಹ್ವಾನದ ಮೇರೆಗೆ ಪ್ರಧಾನಿ ಸೌದಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ವೇಳೆ ಪ್ರಧಾನಿ, ರಿಯಾದ್ ನಲ್ಲಿ ನಡೆಯಲಿರುವ ಭವಿಷ್ಯದ ಹೂಡಿಕೆ ಸಂಸ್ಥೆ ವೇದಿಕೆಯ ಮೂರನೇ ಸಮ್ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಭಾರತ ಹಾಗೂ ಸೌದಿ ಅರೆಬಿಯಾ ನಡುವೆ ತಂತ್ರಗಾರಿಕೆ ಪಾಲುದಾರಿಕೆ ಪರಿಷತ್ತಿನ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗುವುದು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا