Urdu   /   English   /   Nawayathi

ರಹಸ್ಯ ಡ್ರಗ್ಸ್ ಲ್ಯಾಬ್‍ನಲ್ಲಿ 42 ತಲೆಬುರುಡೆಗಳು ಪತ್ತೆ..!

share with us

ಮೆಕ್ಸಿಕೋ: 28 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮೆಕ್ಸಿಕೋ ಜನತೆ ಬೆಚ್ಚಿ ಬೀಳುವಂಥ ಸಂಗತಿಯೊಂದು ಬಯಲಾಗಿದೆ. ಮೆಕ್ಸಿಕೋ ಸಿಟಿಯ ಟೆಪಿಟೋ ಪ್ರದೇಶದಲ್ಲಿ ಡ್ರಗ್ಸ್ ಕಾರ್ಟೆಲ್(ಮಾದಕ ವಸ್ತು ನಿಯಂತ್ರಣ ಜಾಲ)ಗೆ ಸೇರಿದ ರಹಸ್ಯ ಪ್ರಯೋಗಾಲಯವೊಂದರಲ್ಲಿ ಮನುಷ್ಯರ 42 ತಲೆ ಬುರುಡೆಗಳು, ಕೈ ಕಾಲಿನ ಅನೇಕ ಮೂಳೆಗಳು, ಮಾರಕಾಸ್ತ್ರಗಳು ಪತ್ತೆಯಾಗಿವೆ. ಈ ಘಟನೆ ಸಂಬಂಧ ತನಿಖೆ ತೀವ್ರಗೊಳಿಸಿರುವ ಮೆಕ್ಸಿಕೋ ಪೊಲೀಸರು ಈವರೆಗೆ 30ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಮೆಕ್ಸಿಕೋ ಅದರಲ್ಲಿಯೂ ಮೆಕ್ಸಿಕೋ ಸಿಟಿಯ ಡ್ರಗ್ಸ್ ಮಾಫಿಯಾಗೆ 40ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಶಂಕೆ ಇದ್ದು ತನಿಖೆ ತೀವ್ರಗೊಂಡಿದೆ. ಮಾದಕ ವಸ್ತು ಕಳ್ಳಸಾಗಣೆ ದಂಧೆಯ ವ್ಯವಸ್ಥಿತ ಜಾಲವನ್ನು ಮಟ್ಟ ಹಾಕಲು ಪೊಲೀಸರು ಮತ್ತು ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಟೆಪಿಟೋ ಪ್ರದೇಶ ಗುಪ್ತ ಸುರಂಗವೊಂದರಲ್ಲಿ ಡ್ರಗ್ಸ್ ಲ್ಯಾಮೋರೇಟರಿ ಪತ್ತೆಯಾಯಿತು. ಅದರಲ್ಲಿನ ರಹಸ್ಯ ಕೋಣೆಯೊಂದರಲ್ಲಿ 32 ತಲೆ ಬುರುಡೆಗಳು, ಮನುಷ್ಯರ ಕೈಕಾಲು ಮೂಳೆಗಳು, ಅಸ್ತಿಪಂಜರದ ಇತರ ಭಾಗಗಳು, ಗಾಜಿನ ಜಾಡಿಯಲ್ಲಿದ್ಧ ಗರ್ಭಕೋಶ, ಚಾಕುಗಳು ಮತ್ತು ಹರಿತವಾದ ಆಯುಧಗಳು ಪತ್ತೆಯಾದವು. ಈ ಹಿಂದೆ ದಾಳಿ ವೇಳೆ ಬಂಧಿತರಾದ ಡ್ರಗ್ಸ್ ಕಳ್ಳಸಾಗಣೆದಾರರು ನೀಡಿದ ಮಾಹಿತಿ ಮೇರೆಗೆ ಗೋಪ್ಯ ಸುರಂಗ ಪತ್ತೆ ಮಾಡಿ ಅಲ್ಲಿ ಶೋಧ ನಡೆಸುತ್ತಿದ್ದಾಗ ತನಿಖಾಧಿಕಾರಿಗಳೇ ಬೆಚ್ಚಿ ಬೀಳುವಂತೆ ಸಾಲಾಗಿ ಜೋಡಿಸಲಾಗಿದ್ದ ತಲೆಬುರುಡೆ ಪತ್ತೆಯಾಯಿತು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಮೆಕ್ಸಿಕೋ ಸಿಟಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಈ ಹಿಂದೆ ನಾಪತ್ತೆಯಾದ ಮಾದಕ ವ್ಯಸನಿಗಳು ಮತ್ತು ಡ್ರಗ್ಸ್ ದಂಧೆಕೋರರು ಅಪಹರಿಸಿದ್ದ ತಲೆಬುರುಡೆ ಮತ್ತು ಮೂಳೆಗಳು ಇದಾಗಿವೆಯೇ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ತೀವ್ರಗೊಂಡಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا