Urdu   /   English   /   Nawayathi

ಭಾರತ-ಪಾಕ್ ಒಂದಾಗಲು ನಾವು ಬಯಸುತ್ತೇವೆ: ಚೀನಾ ರಾಯಭಾರಿ

share with us

ನವದೆಹಲಿ: 20 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಭಾರತ ಮತ್ತು ಪಾಕಿಸ್ತಾನ ಉತ್ತಮ ಸಂಬಂಧ ಹೊಂದಬೇಕಾಗಿದ್ದು ಶಾಂತಿ ಮತ್ತು ಸ್ಥಿರತೆ ಅಭಿವೃದ್ಧಿಪಡಿಸಲು ಕೈಜೋಡಿಸಬೇಕು ಎಂದು ಭಾರತಕ್ಕೆ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಧ್ಯೆ ಅನೌಪಚಾರಿಕ ಮಾತುಕತೆ ಮುಗಿದ ನಂತರ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಇತ್ತೀಚೆಗೆ ಮಾತನಾಡಿದ ಅವರು, ಚೀನಾ ಮತ್ತು ಭಾರತ ಎರಡೂ ಪ್ರಭಾವಶಾಲಿ ರಾಷ್ಟ್ರಗಳಾಗಿವೆ. ಸ್ಥಳೀಯ ಪರಿಸ್ಥಿತಿಗಳಿಗೆ ಆಳವಾದ ಸಂವಹನ ಹೊಂದಿರುವ ನಾಯಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಚೀನಾ-ಪಾಕಿಸ್ತಾನ, ಚೀನಾ ಭಾರತ ಮತ್ತು ಭಾರತ-ಪಾಕಿಸ್ತಾನ ಮಧ್ಯೆ ಉತ್ತಮ ಸಂಬಂಧವನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ. ಚೀನಾ-ಭಾರತ ಕಾರ್ಯವಿಧಾನದ ಅಡಿಯಲ್ಲಿ ಸಹಕಾರವನ್ನು ಉತ್ತೇಜಿಸುವ ಬಗ್ಗೆ ಚೀನಾದ ಕಡೆಯವರು ತಮ್ಮ ಪ್ರಸ್ತಾಪವನ್ನು ಮುಂದಿಡಲಾಗಿದೆ. ಚೀನಾ-ಭಾರತ, ಅಫ್ಘಾನಿಸ್ತಾನ ಸಹಕಾರದ ಆಧಾರದ ಮೇಲೆ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಇತರ ದೇಶಗಳಿಗೆ ಸಹಕಾರ ಮಾದರಿಯನ್ನು ವಿಸ್ತರಿಸುವುದು ಚೀನಾದ ಯೋಜನೆಯಾಗಿದೆ ಎಂದು ಹೇಳಿದ್ದಾರೆ. ಚೀನಾ ಮತ್ತು ಭಾರತದ ನಡುವಿನ ನಿಕಟ ಸಹಕಾರವು ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಅಂತರರಾಷ್ಟ್ರೀಯ ಕ್ರಮವನ್ನು ನಿರ್ಮಿಸುವ ಮೇಲೆ ಪ್ರಮುಖ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಚೀನಾ ಮತ್ತು ಭಾರತವು ಪ್ರಾದೇಶಿಕ ಅಂತರ ಸಂಪರ್ಕದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಹೆಚ್ಚು ಮುಕ್ತ ಸಂಪರ್ಕ ಜಾಲವನ್ನು ನಿರ್ಮಿಸಲು ಕೆಲಸ ಮಾಡುತ್ತದೆ ಎಂದು ಚೀನಾ ರಾಯಭಾರಿ ಸನ್ ವೈಡೊಂಗ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا