Urdu   /   English   /   Nawayathi

ಆಶ್ರಮದ ಮೇಲೆ ಐಟಿ ದಾಳಿ: 44 ಕೋಟಿ ನಗದು, 88 ಕೆ.ಜಿ ಬಂಗಾರ, ಇನ್ನೂ ಏನೇನು..!

share with us

ಚೆನ್ನೈ: 19 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಲ್ಲಿರುವ ಕಲ್ಕಿ ಭಗವಾನ್​ ಆಶ್ರಮ ಮತ್ತು ಅವರ ಮಗ ಕೃಷ್ಣ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ಇಲಾಖೆ ಬುಧವಾರ ಏಕಕಾಲದಲ್ಲಿ 40 ಕಡೆ ದಾಳಿ ನಡೆಸಿ ಶಾಕ್​ ನೀಡಿತ್ತು. ಈ ದಾಳಿಯಲ್ಲಿ ವಜ್ರ, ಬಂಗಾರ, ಡಾಲರ್​ ಸೇರಿದಂತೆ ಸುಮಾರು 93 ಕೋಟಿ ರೂ ಮೌಲ್ಯದ ಸಂಪತ್ತು ಮತ್ತು 409 ಕೋಟಿ ರೂಗೂ ಹೆಚ್ಚಿನ ಮೌಲ್ಯದ ಅಘೋಷಿತ ಸಂಪತ್ತು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Kalki Bhagwan ashram, IT raid on Kalki Bhagwan ashram, cash found in Kalki Bhagwan ashram, Kalki Bhagwan ashram news, Kalki Bhagwan ashram IT raid news, Kalki Bhagwan ashram IT raid update, Kalki Bhagwan ashram IT raid latest news,

ಆಶ್ರಮದ ಮೇಲೆ ಐಟಿ ದಾಳಿ

ರಿಯಲ್​ ಎಸ್ಟೇಟ್​, ನಿರ್ಮಾಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಧ್ಯಾತ್ಮಿಕ ಗುರು ಕಲ್ಕಿ ಅವರ ಮಗ ಕೃಷ್ಣ ಹಣ ಹೂಡಿಕೆ ಮಾಡಿದ್ದಾರೆ. ಟ್ರಸ್ಟ್​ ಮತ್ತು ಆಶ್ರಮದಿಂದ ಆರೋಗ್ಯ ಶಿಬಿರ ಮತ್ತು ಆಧ್ಯಾತ್ಮಿಕ, ತತ್ವಶಾಸ್ತ್ರ ತರಬೇತಿ ಶಿಬಿರಗಳನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಶಿಬಿರಕ್ಕೆ ಬರುವವರಿಗೆ ಕ್ಯಾಂಪ್​ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿಗೆ ಹೆಚ್ಚಾಗಿ ವಿದೇಶಿ ಗ್ರಾಹಕರು ಬರುತ್ತಾರೆ. ಹೀಗಾಗಿ ಸಾಕಷ್ಟು ವಿದೇಶಿ ಹಣ ವಿನಿಮಯವಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭೂಮಿ ಮೇಲೆ ಸಾಕಷ್ಟು ಪ್ರಮಾಣದ ಹೂಡಿಕೆ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Kalki Bhagwan ashram, IT raid on Kalki Bhagwan ashram, cash found in Kalki Bhagwan ashram, Kalki Bhagwan ashram news, Kalki Bhagwan ashram IT raid news, Kalki Bhagwan ashram IT raid update, Kalki Bhagwan ashram IT raid latest news,

ಆಶ್ರಮದ ಮೇಲೆ ಐಟಿ ದಾಳಿ

ದಾಳಿಯ ವೇಳೆ, ಆಶ್ರಮವು ತನ್ನ ವಿವಿಧ ಶಾಖೆಗಳಿಂದ ನಿಯಮಿತವಾಗಿ ದೇಣಿಗೆ ಸಂಗ್ರಹಿಸುತ್ತಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ. ಆಶ್ರಮದಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿಗಳು ಸೇರಿದಂತೆ 43 ಕೋಟಿ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Kalki Bhagwan ashram, IT raid on Kalki Bhagwan ashram, cash found in Kalki Bhagwan ashram, Kalki Bhagwan ashram news, Kalki Bhagwan ashram IT raid news, Kalki Bhagwan ashram IT raid update, Kalki Bhagwan ashram IT raid latest news,

ಆಶ್ರಮದ ಮೇಲೆ ಐಟಿ ದಾಳಿ

ಸುಮಾರು 18 ಕೋಟಿ ರೂ. ಬೆಲೆಬಾಳು ಅಮೆರಿಕ ಡಾಲರ್​, 26 ಕೋಟಿ ಮೌಲ್ಯದ ಅಘೋಷಿತ 88 ಕೆ.ಜಿ. ಬಂಗಾರ ಹಾಗೂ 5 ಕೋಟಿ ಮೌಲ್ಯದ 1,271 ಕ್ಯಾರೆಟ್​ ವಜ್ರಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿಯವರೆಗೆ ಬಹಿರಂಗಪಡಿಸದ ಆದಾಯವು ಸುಮಾರು 409 ಕೋಟಿ ರೂ.ಗಳಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ ಅಂತಾ ಐಟಿ ಇಲಾಖೆ ಹೇಳಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا