Urdu   /   English   /   Nawayathi

ಭಾರತ, ಚೀನಾ ದೇಶಗಳನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸುತ್ತಿಲ್ಲ: ಡೊನಾಲ್ಡ್ ಟ್ರಂಪ್

share with us

ವಾಷಿಂಗ್ಟನ್: 19 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಭಾರತ ಹಾಗೂ ಚೀನಾ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಟ್ರಂಪ್ ಅವರು, ಭಾರತ ಹಾಗೂ ಚೀನಾ ರಾಷ್ಟ್ರಗಳು ಅಮೆರಿಕಾದಿಂದ ಲಾಭ ಮಾಡಿಕೊಳ್ಳುತ್ತಿದೆ. ಹೀಗಾಗಿ ಭಾರತ ಹಾಗೂ ಚೀನಾ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಒ) ಎಂತಹದ್ದು... ಅದರ ಸೌಂದರ್ಯವೇನು... ಡಬ್ಲ್ಯೂಟಿಒ ಚೀನಾವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸುತ್ತಿದೆ. ಈ ಸಂಬಂಧ ಶೀಘ್ರದಲ್ಲಿಯೇ ಡಬ್ಲ್ಯೂಟಿಒಗೆ ಪತ್ರ ಬರೆಯಲಾಗುತ್ತದೆ. ಚೀನಾವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ನಾವು ಪರಿಗಣಿಸುವುದಿಲ್ಲ. ಭಾರತವನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸುವುದಿಲ್ಲ. ಈ ಎರಡೂ ರಾಷ್ಟ್ರಗಳು ಅಮೆರಿಕಾದಿಂದ ಲಾಭ ಮಾಡಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ. ಚೀನಾದ ವಸ್ತುಗಳ ಮೇಲೆ ಅಮೆರಿಕಾ ಭಾರೀ ಸುಂಕವನ್ನು ವಿಧಿಸಿದ್ದು, ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕಾದ ಉತ್ಪನ್ನಗಳ ಮೇಲೆ ಭಾರೀ ಸುಂಕವನ್ನು ವಿಧಿಸಿದೆ. ಅಮೆರಿಕಾ ಹಾಗೂ ಚೀನಾದ ವ್ಯಾಪಾರ ಯುದ್ಧ (ಟ್ರೇಡ್ ವಾರ್)ನಿಂದಾಗಿ ಇದೀಗ ಜಾಗತಿಕ ಆರ್ಥಿಕ ಹಿಂಜರಿತವಾಗಬಹುದು ಎಂದು ಹೇಳಲಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವಿಶ್ವ ವಾಣಿಜ್ಯ ಸಂಸ್ಥೆ ಕೆಲವು ಸವಲತ್ತುಗಳನ್ನು ನೀಡುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಮದು ಹಾಗೂ ರಫ್ತಿಗೆ ಸುಂಕದಲ್ಲಿ ಕೆಲವೊಂದು ಸಡಲಿಕೆ ಮಾಡುತ್ತದೆ. ಅಲ್ಲದೇ, ಕೆಲವೊಂದು ರಫ್ತಿಗೆ ಸಬ್ಸಿಡಿಗಳನ್ನೂ ನೀಡುತ್ತದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا