Urdu   /   English   /   Nawayathi

ಪ್ರತಿ ನಿಮಿಷಕ್ಕೆ 6 ಪೈಸೆ: ರಿಲಯನ್ಸ್ ಜಿಯೊ ನಿರ್ಧಾರ ಖಂಡಿಸಿದ ವೊಡಾಫೋನ್ ಐಡಿಯಾ

share with us

ನವದೆಹಲಿ: 12 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಿಯೊದಿಂದ ಬೇರೆ ನೆಟ್‌ವರ್ಕ್‌ಗೆ ವಾಯ್ಸ್‌ ಕಾಲ್‌ ಮಾಡಿದರೆ ಗ್ರಾಹಕರು ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ. ರಿಲಯನ್ಸ್ ಜಿಯೊದ ಈ ನಿರ್ಧಾರವನ್ನು ಖಂಡಿಸಿದ ವೊಡಾಫೋನ್- ಐಡಿಯಾ  ಇದು ಅನುಚಿತ ಅವಸರದ ಕಾರ್ಯ ಎಂದು ಹೇಳಿದೆ. ಅಂತರ್‌ಸಂಪರ್ಕ ಬಳಕೆ ಶುಲ್ಕ (ಐಯುಸಿ–ಜಿಯೊದಿಂದ ಐಡಿಯಾ ಅಥವಾ ಬೇರಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ವಿಧಿಸುವ ಶುಲ್ಕ)ವು ಆಪರೇಟರ್‌ಗಳ ನಡುವಿನ ವ್ಯವಸ್ಥೆಯಾಗಿದೆ. ಇದು ಗ್ರಾಹಕರ ಶುಲ್ಕಕ್ಕೆ ಸಂಬಂಧಪಟ್ಟದ್ದಲ್ಲ. ರಿಂಗಿಂಗ್ ಸಮಯವನ್ನು ಕಡಿಮೆಗೊಳಿಸಲು ರಿಲಾಯನ್ಸ್ ಜಿಯೊದ ಚಿಂತನೆ ನಡೆಸಿದ್ದು ಇದು ಇತರ ಆಪರೇಟರ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವೊಡಾಫೋನ್ ಐಡಿಯಾ ಹೇಳಿದೆ. ವೊಡಾಫೋನ್ ಐಡಿಯಾ ಕಂಪನಿ ಗ್ರಾಹಕ ಮತ್ತು ಅವರ ಆಯ್ಕೆಗೆ ಒತ್ತು ನೀಡಿ ಕಾರ್ಯವೆಸಗುತ್ತದೆ. ನಮ್ಮ ಕೊಡುಗೆಗಳು ಸಂಪೂರ್ಣ ಪಾರದರ್ಶಕ,  ಸಮರ್ಥ ಮತ್ತು ಎಲ್ಲ ರೀತಿಯ ಗ್ರಾಹಕರಿಗೆ 2ಜಿ, 3ಜಿ ಮತ್ತು 4ಜಿ ಮೂಲಕ ಸೇವೆ ಒದಗಿಸುವುದಾಗಿದೆ. ದೇಶದಲ್ಲಿನ ಶೇ.50ರಷ್ಟು ಭಾರತೀಯರೂ ಈಗಲೂ 2ಜಿ ಮತ್ತು ಫೀಚರ್ ಫೋನ್ (ಸಾಮಾನ್ಯ ಮೊಬೈಲ್ ಫೋನ್)ಗಳನ್ನು ಬಳಸುತ್ತಿದ್ದಾರೆ. ದೇಶದ ದೂರದ ಗ್ರಾಮಗಳಲ್ಲಿ ಸೇವೆ ನೀಡುವುದು ನಮಗೆ ಲಾಭದಾಯಕವಲ್ಲದೇ ಇದ್ದರೂ ನಾವು  ಅಲ್ಲಿನ ಗ್ರಾಹಕರಿಗೆ ಸೇವೆ ನೀಡುತ್ತೇವೆ. ಆನ್ ನೆಟ್ ಮತ್ತು ಆಫ್ ನೆಟ್ ಕರೆಯ ವ್ಯತ್ಯಾಸವನ್ನು ತಿಳಿಯುವ ಸ್ಥಿತಿಯಲ್ಲಿ ಗ್ರಾಹಕರು ಇಲ್ಲ. ಅದನ್ನು ವಿವರಿಸಲು ಪ್ರಯತ್ನಿಸಿ ನಾವು ನಮ್ಮ ಗ್ರಾಹಕರಿಗೆ ಹೊರೆಯಾಗಲು ಬಯಸುವುದಿಲ್ಲ. ನಮ್ಮ ಎಲ್ಲ ಯೋಜನೆಗಳು ಆನ್ ನೆಟ್ ಮತ್ತು ಆಫ್ ನೆಟ್ ಆಗಿದ್ದು, ಇದಕ್ಕಾಗಿ ಪ್ರತ್ಯೇಕ ಪಾವತಿ ಮಾಡಬೇಕಿಂದಿಲ್ಲ. ನಮ್ಮ ಗ್ರಾಹಕರಲ್ಲಿ ಶೇ.60ಕ್ಕಿಂತ ಹೆಚ್ಚಿನ ಗ್ರಾಹಕರು ದುಬಾರಿ ಪ್ಲಾನ್ ಬಯಸುವುದಿಲ್ಲ. ಅವರ ಅಗತ್ಯಗಳು ಜಾಸ್ತಿ ಇದ್ದರೂ ಅವರು ಅದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವುದಿಲ್ಲ ಎಂದು ವೊಡಾಫೋನ್ ಕಂಪನಿ ಹೇಳಿಕೆ ನೀಡಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا