Urdu   /   English   /   Nawayathi

ಎಫ್​ಎ​ಟಿಎಫ್ ಸಭೆ ಬಗ್ಗೆ ಹೆಚ್ಚಿದ ಕುತೂಹಲ.. ಪಾಕ್‌ ಕಪ್ಪುಪಟ್ಟಿಗೆ ಸೇರಿದ್ರೆ ಏನಾಗುತ್ತೆ..?

share with us

ಪ್ಯಾರಿಸ್: 12 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ(ಎಫ್​ಎ​ಟಿಎಫ್) ಅಕ್ಟೋಬರ್‌ 13ರಿಂದ ಅ.16ರವರೆಗೆ ಪ್ಯಾರಿಸ್​ನಲ್ಲಿ ಸಭೆ ಸೇರಲಿದ್ದು, ಪಾಕಿಸ್ತಾನ ಹಾಗೂ ಭಾರತಕ್ಕೆ ಈ ಸಭೆ ಅತ್ಯಂತ ಪ್ರಮುಖವಾಗಿದೆ. ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕಿಸ್ತಾನ ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಮತ್ತು ಕಪ್ಪುಪಟ್ಟಿಗೆ ಸೇರ್ಪಡೆಯ ವಿಚಾರವೂ ಈ ಸಭೆಯಲ್ಲಿ ಪ್ರಸ್ತಾಪವಾಗಲಿದೆ. 2012ರಿಂದ ಬೂದು ಪಟ್ಟಿ(ಗ್ರೇ ಲಿಸ್ಟ್) ಸೇರಿರುವ ಪಾಕಿಸ್ತಾನ 2015-16ರಲ್ಲಿ ಹೊರಗುಳಿದಿತ್ತು. ಜಿ-7 ರಾಷ್ಟ್ರಗಳು ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ 1989ರಲ್ಲಿ ಪ್ರಾರಂಭಿಸಿತ್ತು. ಅಕ್ರಮ ಹಣ ವ್ಯವಹಾರ ಹಾಗೂ ಭಯೋತ್ಪಾದನೆ ಪೋಷಿಸುವ ರಾಷ್ಟ್ರದ ವಿರುದ್ಧ ಕ್ರಮ ಕೈಗೊಳ್ಳಲು ಎಫ್​ಎ​ಟಿಎಫ್ ಅಸ್ತಿತ್ವಕ್ಕೆ ಬಂದಿತ್ತು. ಎಫ್​ಎ​ಟಿಎಫ್​ನಲ್ಲಿ ಭಾರತ ಸೇರಿದಂತೆ 37 ಸದಸ್ಯ ರಾಷ್ಟ್ರಗಳಿವೆ. ಈ ಸಂಘಟನೆಯಲ್ಲಿ ಪಾಕಿಸ್ತಾನ ಇಲ್ಲ ಎನ್ನುವುದು ಗಮನಾರ್ಹ ಸಂಗತಿ. ಭಯೋತ್ಪಾದನೆಗೆ ಬಂಡವಾಳದ ನೆರವು ಹಾಗೂ ಅಕ್ರಮ ಹಣ ವ್ಯವಹಾರ ನಿಗ್ರಹಕ್ಕೆ ಹತ್ತು ವರ್ಷದ ಹಿಂದೆ 40 ಅಂಶಗಳನ್ನು ರಚಿಸಿತ್ತು. ಈ 40 ಅಂಶಗಳಲ್ಲಿ 2018ಕ್ಕೆ ಅನ್ವಯವಾಗುವಂತೆ ಪಾಕಿಸ್ತಾನ ಹಲವು ಅಂಶಗಳಲ್ಲಿ ಸಾಕಷ್ಟು ಹಿಂದುಳಿದಿತ್ತು ಅರ್ಥಾತ್ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ಪ್ರಗತಿ ಸಾಧಿಸಿಲ್ಲ ಎನ್ನುವ ವಿಚಾರ ಎಫ್​ಎ​ಟಿಎಫ್​ಗೆ ಸಲ್ಲಿಕೆಯಾದ ವರದಿಯಲ್ಲಿ ಉಲ್ಲೇಖವಾಗಿತ್ತು.

Imran Khan

ಪ್ರಧಾನಿ ಇಮ್ರಾನ್ ಖಾನ್

2018ರ ಫೆಬ್ರವರಿಯಲ್ಲಿ ಪಾಕಿಸ್ತಾನ ಕೆಲ ಪ್ರಮುಖ ಉಗ್ರರನ್ನು ಬಂಧಿಸಿತ್ತು. ಭಯೋತ್ಪಾದನೆ ನಿಗ್ರಹದಲ್ಲಿ ತಾವು ಸಕ್ರಿಯರಾಗಿದ್ದೇವೆ ಎನ್ನುವ ಸಂದೇಶ ಸಾರಲು ಪಾಕಿಸ್ತಾನ ಈ ನಡೆ ಅನುಸರಿಸಿತ್ತು. ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿದರೆ ಏನಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ಪಾಕಿಸ್ತಾನದ ಆರ್ಥಿಕತೆ ಹಳ್ಳ ಹಿಡಿದಿದೆ. 'ನಯಾ ಪಾಕಿಸ್ತಾನ್' ಎನ್ನುತ್ತಲೇ ಅಧಿಕಾರಕ್ಕೆ ಏರಿದ್ದ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನವನ್ನು ಮತ್ತಷ್ಟು ದುರ್ಬರಗೊಳಿಸಿದ್ದಾರೆ.

ಪಾಕ್​ ಕಪ್ಪುಪಟ್ಟಿಗೆ ಸೇರಿದರೆ ಏನಾಗಲಿದೆ..?

  • ಪಾಕಿಸ್ತಾನದಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಕಂಪನಿಗಳು ಹಿಂದೆಸರಿಯಬಹುದು.
  • ವಿದೇಶಿ ಕರೆನ್ಸಿ ವಹಿವಾಟು ಮತ್ತು ಪಾಕಿಸ್ತಾನದ ರೂಪಾಯಿ ಮೌಲ್ಯ ಕನಿಷ್ಠಮಟ್ಟಕ್ಕೆ ಕುಸಿಯಬಹುದು.
  • ಪಾಕಿಸ್ತಾನದ ಷೇರುಮಾರುಕಟ್ಟೆ ಮಹಾಪತನ ನಿಶ್ಚಿತ
  • ವಿದೇಶಿ ವಿನಿಮಯ ನಿಕ್ಷೇಪಗಳು ವೇಗವಾಗಿ ನಾಶವಾಗಬಹುದು.
  • ಹಣದುಬ್ಬರ ಹಿಡಿತಕ್ಕೇ ಸಿಗದಷ್ಟು ಏರಿಕೆಯಾಗಬಹುದು
  • ಪಾಕಿಸ್ತಾನದೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು. ದೇಶಕ್ಕೆ ಹೆಚ್ಚಿನ ಸಾಲಗಳಿ ಸಿಗದಿರಬಹುದು.
  • ಜಾಗತಿಕ ನೆರವು ಮತ್ತು ಸಹಾಯಗಳು ಸ್ಥಗಿತವಾಗಬಹುದು.
  • ವಾಣಿಜ್ಯ ವ್ಯವಹಾರ ನೆಲಕಚ್ಚಬಹುದು.

ಪಾಕಿಸ್ತಾನದ ನಡೆಗಳೇ ಕಪ್ಪುಪಟ್ಟಿಗೆ ಸೇರಿಸುವಂತಿದ್ದು, ಒಂದು ವೇಳೆ ಕಪ್ಪುಪಟ್ಟಿಗೆ ಸೇರದಿದ್ದರೂ ಈಗಿರುವ ಬೂದುಪಟ್ಟಿಯಲ್ಲಿ ಮುಂದುವರೆಯುವುದು ನಿಶ್ಚಿತ. ಈ ವಿಚಾರದಲ್ಲಿ ಪಾಕಿಸ್ತಾನದ ಸಹಾಯ ಚೀನಾ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا