Urdu   /   English   /   Nawayathi

ಐಟಿ ದಾಳಿ ಬಗ್ಗೆ ಗೊತ್ತಿರಲಿಲ್ಲ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇನೆ: ಜಿ ಪರಮೇಶ್ವರ್

share with us

ತುಮಕೂರು: 10 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ಇರಲಿಲ್ಲ. ನಮ್ಮಿಂದ ತಪ್ಪುಗಳಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಸಿದ್ಧ ಎಂದು ಮಾಜಿ ಉಪಮುಖ್ಯಮಂತ್ರಿ ಜಿ,ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲೆಲ್ಲಿ ದಾಳಿ ನಡೆಸಿದ್ದಾರೆಂಬುದೂ ನನಗೆ ಗೊತ್ತಿಲ್ಲ. ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿದರೆ ಯಾವುದೇ ತೊಂದರೆಯಿಲ್ಲ. ನಮ್ಮ ಸಂಸ್ಥೆ ಮೇಲೆ ದಾಳಿ ಮಾಡಿದರೆ ಸ್ವಾಗತ. ಎಲ್ಲಾ ರೀತಿಯ ದಾಖಲೆಗಳನ್ನು ಪರಿಶೀಲಿಸಲಿ. ಇದಕ್ಕೆ ನನ್ನ ಆಕ್ಷೇಪವನೇನೂ ಇಲ್ಲ. ನಮ್ಮಿಂದ ದೋಷಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವಲ್ಲಿ ಸಿದ್ಧರಿದ್ದೇವೆ. ಹಾಗೆಯೇ ಅವರ ಸಲಹೆಯಂತೆ ನಡೆದುಕೊಳ್ಳಲಿದ್ದೇವೆಂದು ಹೇಳಿದ್ದಾರೆ. 

ಸರ್ಕಾರದಲವ್ಲಿ ಹಣವಿಲ್ಲ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಿ
ಕರ್ನಾಟಕದಲ್ಲಿ ಅತ್ಯಂತ ಭೀಕರ ನೆರೆ ಉಂಟಾಗಿದೆ. ಜನ ಜಾನುವಾರಗಳ ಪ್ರಾಣ ಹಾನಿ, ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ, ಕೇಂದ್ರದಿಂದ ಪರಿಹಾರ ಪಡೆಯಲು ರಾಜ್ಯದಿಂದ ಪಕ್ಷಾತೀತವಾಗಿ ನಿಯೋಗ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿಲ್ಲ. ಈ ಬಗ್ಗೆ ಸದನದಲ್ಲಿ ದನಿ ಎತ್ತಲಿದ್ದೇವೆ. ನಮ್ಮ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಿ ಸಂತೋಷ. ನಮ್ಮ ತಪ್ಪುಗಳಿದ್ದರೆ ದಾಳಿ ಮಾಡಲಿ. ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಬೇಕಾದಷ್ಟು ಹಣವಿದೆ. ಅಷ್ಟಿದ್ದರೆ, ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا