Urdu   /   English   /   Nawayathi

ಮಡಿವಂತಿಕೆ ಅಲ್ಲದ ಜನಪರ ಆರ್ಥಿಕತೆ ಬೇಕಾಗಿದೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್

share with us

ಬೆಂಗಳೂರು: 09 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜನಪರ ಅರ್ಥ ವ್ಯವಸ್ಥೆ ಹಾಳಾಗಿ ಹೋಗಿರುವ ಕಾರಣದಿಂದ ಪವಿತ್ರ ಆರ್ಥಿಕತೆಗಾಗಿ ಚಳವಳಿ ಆರಂಭಿಸಬೇಕಾಗಿದೆ ಎಂದು ವಿಧಾನಸಭಾ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ಆರ್. ರಮೇಶ್ ಕುಮಾರ್ ಹೇಳಿದ್ದಾರೆ. 'ಪವಿತ್ರ ಆರ್ಥಿಕತೆಗಾಗಿ' ಪ್ರಸನ್ನ ಅವರು ಕೈಗೊಂಡ  ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಆರ್ಥಿಕ ಕ್ಷೇತ್ರದಲ್ಲಿ ಪಾವಿತ್ರ್ಯತೆ ಬೇಕು. ಹಾಗಂತ ಅದು ಮತ್ತೆ ಮಡಿವಂತಿಕೆ ಆಗಬಾರದು, ಜನಪರ ಆರ್ಥಿಕತೆ ಆಗಬೇಕಾಗಿದೆ. ಉತ್ಪಾದಕರು ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆ ಆಗಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದ ಹಾಗೇ ಇದನ್ನು ಮೇಲೆತ್ತಬೇಕು. ತಾವಂತೂ ಈ ಚಳವಳಿಗೆ ಕಾಯಾ ವಾಚಾ ಮನಸಾ ಜೊತೆಗಿದ್ದೇನೆ ಎಂದರು. ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಗೋಪಾಲ ಗೌಡ ಮಾತನಾಡಿ, 'ಮಾನವಹಕ್ಕುಗಳು ಮತ್ತು ಮನುಷ್ಯರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಎರಡೂ ಸರಕಾರಗಳು ಸೋತಿವೆ. ಬಡತನ, ನಿರುದ್ಯೋಗ, ಅನಾರೋಗ್ಯ, ಪರಿಸರ ಹಾನಿ, ಸಂಪೂರ್ಣ ಕೆಳಗಿಳಿದ ದೇಶದ ಜಿಡಿಪಿ, ರೈತರ ಸರಣಿ ಆತ್ಮಹತ್ಯೆಗಳು, ಪ್ರಕೃತಿ ವಿಕೋಪಕ್ಕೊಳಗಾದ ಜಿಲ್ಲೆ ಹಾಗೂ ಜನರಿಗೆ ಇನ್ನೂ ತಲುಪದ ಪರಿಹಾರ ದಾರಿಗಳು ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಸರಕಾರಗಳು ಕಾರ್ಯನಿರ್ವಹಿಸಬೇಕು ಎಂದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا