Urdu   /   English   /   Nawayathi

ಜಾನ್ಸನ್ & ಜಾನ್ಸನ್ ಗೆ 8 ಬಿಲಿಯನ್ ಡಾಲರ್ ದಂಡ ವಿಧಿಸಿದ ಫಿಲಿಡೆಲ್ಫಿಯಾ ಕೋರ್ಟ್

share with us

ಫಿಲಿಡೆಲ್ಫಿಯಾ: 09 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಪ್ರತಿಷ್ಠಿತ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆ ಔಷಧಿ ಸೇವಿಸಿದ ಪುರುಷರಲ್ಲಿ ಸ್ತನಗಳು ಬೆಳವಣಿಗೆಯಾಗುತ್ತಿದ್ದು ಇದರ ಸಂಬಂಧ ಮುಂಚಿತವಾಗಿ ಎಚ್ಚರಿಕೆ ನೀಡದ ಸಂಸ್ಥೆಯ ವಿರುದ್ಧ ಅಮೆರಿಕಾ ನ್ಯಾಯಾಲಯವೊಂದು ಎಂಟು ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿದೆ. ಸಂಸ್ಥೆಯ ಆಂಟಿ ಸೈಕೋಟಿಕ್ (ಕೆಲ ಮಾನಸಿಕ ಖಾಯಿಲೆಗಳು)ಔಷಧ ರಿಸ್ಸೆರ್ಡಾಲ್ ಸೇವಿಸಿದ ಯುವಕರಲ್ಲಿ ಸ್ತನಗಳು ಬೆಳೆಯುತ್ತದೆ ಎನ್ನುವ ಎಚ್ಚರಿಕೆ ನೀಡಲು ವಿಫಲವಾಗಿರುವ ಹಿನ್ನೆಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಫಿಲಿಡೆಲ್ಫಿಯಾ ನ್ಯಾಯಾಲಯ ಸಂಸ್ಥೆಗೆ ಎಂಟು ಬಿಲಿಯನ್ ಡಾಲರ್ ಪರಿಹಾರ ನಿಡಲು ಆದೇಶಿಸಿದೆ. ಫಿಲಡೆಲ್ಫಿಯಾ ಕೋರ್ಟ್ ಆಫ್ ಕಾಮನ್ ಪ್ಲೀ ತೀರ್ಪುಗಾರರು ನಿಕೋಲಾಸ್ ಮರ್ರೆ ಎಂಬ ವ್ಯಕ್ತಿಯ ಪ್ರಕರಣಕ್ಕೆ ಸಂಬಂಧಿಸಿ ಈ ತೀರ್ಪು ನೀಡಿದ್ದಾರೆ. ರಾಜ್ಯದಲ್ಲಿ ಈ ಸಂಬಂಧ ಸಾವಿರಾರು ಪ್ರಕರಣಗಳು ಭಾಕಿ ಇದ್ದು ಇದೀಗ ಮರ್ರೆ ಪ್ರಕರಣದಲ್ಲಿ ಮಹತ್ವದ ಆದೇಶ ಹೊರಬಿದ್ದಿದೆ. ಗ್ರಾಹಕರ ಸುರಕ್ಷತೆ, ಆರೋಗ್ಯ ಕಾಳಜಿ ಬಗೆಗೆ ಹೆಚ್ಚು ಯೋಚಿಸದೆ ಸಂಸ್ಥೆಯು ತನ್ನ ಲಾಭದ ಕುರಿತಂತೆ ಗಮನ ನಿಡಿದ್ದು ಈಗ ಸಮಸ್ಯೆಯಿಂದ ಭಾಧಿತನಾಗಿರುವ ವ್ಯಕ್ತಿಗೆ ಪರಿಹಾರ ನಿಡಬೇಕೆಂದು ನ್ಯಾಯಾಲಯ ಸಂಸ್ಥೆಗೆ ಕಟ್ಟಫ್ಫಣೆ ಮಾಡಿದೆ ಎಂದು ಮರ್ರೆ ಪರ ವಕೀಲರು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا