Urdu   /   English   /   Nawayathi

ಜಾಲಹಳ್ಳಿ ಬಳಿ ವಾಯು ಪಡೆ ಕಾಂಪೌಂಡ್​​​​ ಗೋಡೆ ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ

share with us

ಬೆಂಗಳೂರು: 08 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ವಾಯು ಪಡೆ ಕೇಂದ್ರದ ಕಾಂಪೌಂಡ್​ ಗೋಡೆ ಕುಸಿದು ಬಿದ್ದು ಓರ್ವ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದೆ‌. ಈ ದುರ್ಘಟನೆಯಲ್ಲಿ ಪರಮೇಶ್ ಎಂಬುವವರು ಸಾವನ್ನಪ್ಪಿದ್ದು, ವರುಣ್ ಮತ್ತು ಕಲ್ಯಾಣಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇಂದು ಮಧ್ಯಾಹ್ನ ಏಕಾಏಕಿ ವಾಯು ಪಡೆ ಕೇಂದ್ರದ ಕಾಂಪೌಂಡ್​ ಗೋಡೆ ಕುಸಿದಿರುವ ಕಾರಣ ಅಲ್ಲೇ ನಿಂತಿದ್ದ ಮೂವರ ಮೇಲೆ ಕಲ್ಲುಗಳು ಬಿದ್ದಿವೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬಂದು ರಕ್ಷಣಾ ಕಾರ್ಯ ಮಾಡಿದ್ದು, ಏರ್​ಫೋರ್ಸ್ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಅಕ್ರೋಶ ಹೊರ ಹಾಕಿದ್ದಾರೆ. ಜಾಲಹಳ್ಳಿಯಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا