Urdu   /   English   /   Nawayathi

ಉಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ: ಮತ್ತೆ ಸಿಟ್ಟಿಗೆದ್ದ ನಗರ ಆಯುಕ್ತ

share with us

ಬೆಂಗಳೂರು: 08 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಉಬರ್ ಚಾಲಕ ಟೆಕ್ಕಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಮತ್ತೆ ಬೆಳಕಿಗೆ ಬಂದಿದೆ. ಅನೀಕ್ ಹಲ್ಲೆಗೊಳಗಾದ ಟೆಕ್ಕಿ. ಅನೀಕ್ ಬೆಂಗಳೂರಿನಿಂದ ಕೋಲ್ಕತ್ತಾಗೆ ಹೋಗುವವರಿದ್ದರು. ಹೀಗಾಗಿ ಮೆಜೆಸ್ಟಿಕ್​​ನಿಂದ ಏರ್​​ಪೋರ್ಟ್​ಗೆ ತೆರಳಲು ಶೇರಿಂಗ್ ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಹತ್ತಿದ ಅನಿಕ್, ಚಾಲಕನಿಗೆ‌ ವಿಮಾನ ಬೇಗ ಬರುತ್ತೆ ಸ್ವಲ್ಪ ಬೇಗ ಹೋಗಿ ಎಂದಿದ್ದರು. ಆದರೂ ನಿಧಾನವಾಗಿ ಚಲಿಸುತ್ತಿದ್ದ ಚಾಲಕ ಹರೀಶ್​, ಮತ್ತೊಮ್ಮೆ ಬೇಗ ಹೋಗಿ ಎಂದಿದ್ದಕ್ಕೆ ಸಿಟ್ಟಾಗಿದ್ದಾನೆ. ಈ ಹಿನ್ನೆಲೆ ಅನೀಕ್ ಬೇರೊಂದು ಕ್ಯಾಬ್ ಬುಕ್ ಮಾಡಿದ್ದ. ಅನೀಕ್ ಬುಕ್ ಮಾಡಿದ್ದು ಉಬರ್ ಶೇರ್ ಆದ್ರೂ ಉಬರ್ ಗೋ ಚಾರ್ಜ್ ಕೊಡುವಂತೆ ಒತ್ತಾಯ ಮಾಡಿದ್ದಾನೆ‌. ಇದಕ್ಕೆ ಒಪ್ಪದಿದ್ದಾಗ ಬೇರೊಂದು ಕ್ಯಾಬ್ ಬುಕ್ ಮಾಡ್ತೀಯಾ ಎಂದು ಚಾಲಕ, ಅನೀಕ್​ಗೆ ಹಿಗ್ಗಾ ಮುಗ್ಗಾ ಥಳಿಸಿದ ಪರಿಣಾಮ ಮೂಗಲ್ಲಿ ರಕ್ತ ಸೋರಿಕೆಯಾಗಿದೆ. ತಕ್ಷಣ ಅನೀಕ್ ಜೋರಾಗಿ ಕೂಗಿಕೊಂಡಿದ್ದು, ಸ್ಥಳಕ್ಕಾಗಮಿಸಿದ ಸ್ಥಳೀಯರು ಆತನನ್ನ ರಕ್ಷಿಸಿದ್ದಾರೆ. ಬಳಿಕ ಈ ವಿಚಾರವನ್ನು ಅನೀಕ್​​, ನಗರ ಆಯುಕ್ತರಿಗೆ ತಿಳಿಸಿದ್ದಾನೆ. ಇತ್ತೀಚೆಗಷ್ಟೇ ಓಲಾ, ಉಬರ್ ಸಂಸ್ಥೆಗೆ ಚಾಲಕರು ಪ್ರಯಾಣಿಕರ ಜೊತೆ ಸರಿಯಾಗಿ ನಡೆದುಕೊಳ್ಳಬೇಕೆಂದು ಆಯುಕ್ತರು ಎಚ್ಚರಿಕೆಯ ಸಂದೇಶ ನೀಡಿದ್ದರು. ಈಗ ಮತ್ತೆ‌ ಈ ರೀತಿ ವಿಚಾರ ಬೆಳಕಿಗೆ ‌ಬಂದಿರುವ ಹಿನ್ನೆಲೆ ಸಂಬಂಧಿಸಿದ ಪೊಲೀಸರಿಗೆ ಮಾಹಿತಿ ರವಾನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا