Urdu   /   English   /   Nawayathi

ದಾವಣಗೆರೆ: ಪರ್ಸ್ ತೋರ್ಸಿ ಹಣ ಕೊಡಿ-ವಾಹನ ಸವಾರರಿಂದ ಹಣ ಕೀಳುತ್ತಿದ್ದ ಮುಖ್ಯಪೇದೆ, ಎಎಸ್ಐ ಅಮಾನತು

share with us

ದಾವಣಗೆರೆ: 07 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ವಾಹನ ಸವಾರನಿಂದ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸದೇ, ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪದಡಿ ಮುಖ್ಯ ಪೊಲೀಸ್ ಪೇದೆ ಹಾಗೂ ಒಬ್ಬ ಎಎಸ್ಐ ಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠ ಹನುಮಂತರಾಯ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆ ರವಿ ಹಾಗೂ ಎಎಸ್‍ಐ ಜಯಣ್ಣ  ಅವರುಗಳು ಅಮಾನತುಗೊಂಡ ಪೋಲೀಸ್ ಅಧಿಕಾರಿಗಳಾಗಿದ್ದು ಇವರು ವಾಹನ ಸವಾರರಿಂದ ಅಕ್ರ್ಮವಾಗಿ ಹಣ ಪಡೆಯುತ್ತಿದ್ದವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ವಿಚಾರಣೆ ಕೈಗೊಂಡ ಎಸ್‍ಪಿ ಹನುಮಂತರಾಯ ಇಬ್ಬರನ್ನೂ ಅಮಾನತು ಮಾಡಿ ಆದೇಶಿಸಿದ್ದಾರೆ. ದಾವಣಗೆರೆ ಬಿಪಿ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ರವಿ ದಂಡ ವಿಧಿಸದೆ ವಾಹನ ಸವಾರರಿಂದ ಹಣ ಪಡೆಯುತ್ತಿದ್ದರು.ತಾವು ಪಡೆದ ಹಣಕ್ಕೆ ಯಾವ ರಸೀದಿಯನ್ನೂ ನೀಡುತ್ತಿರಲಿಲ್ಲ. ಇದರ ಕುರೊತಂತೆ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆ ನಂತರ ಪೋಲೀಸ್ ಇಲಾಖೆ ಇವರ ವಿರುದ್ಧ ಗಂಭೀರ ಕ್ರಮಕ್ಕೆ ಮುಂಡಾಗಿದೆ. ತನಿಖೆ ನಡೆಯುವ ವೇಳೆ ರವಿ ಅವರಿಗೆ  ಎಎಸ್‍ಐ ಜಯಣ್ಣ ಸಾಥ್ ಕೊಟ್ಟಿರುವುದು ಸಹ ಬೆಳಕಿಗೆ ಬಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا