Urdu   /   English   /   Nawayathi

ಭಾರತಕ್ಕೆ ಕಾಳಧನಿಕರ ಪಟ್ಟಿ... ಬ್ಲಾಕ್​ ಮನಿ ಇಟ್ಟವರ ಎದೆಯಲ್ಲಿ ಢವಢವ ಶುರು!

share with us

ನವದೆಹಲಿ: 07 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರಕ್ಕೆ ಇದೇ ಮೊದಲ ಬಾರಿಗೆ ಸ್ವಿಸ್​ ಬ್ಯಾಂಕ್​​ನಲ್ಲಿರುವ ಭಾರತೀಯರ ಬ್ಯಾಂಕ್​ ಖಾತೆಗಳ ಮೊದಲ ಪಟ್ಟಿ ಲಭ್ಯವಾಗಿದೆ. ಇದರಿಂದ ಅನೇಕ ವರ್ಷಗಳಿಂದ ಇದರ ವಿರುದ್ಧ ನಡೆಯುತ್ತಿದ್ದ ಸಮರದಲ್ಲಿ ಭಾರತಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಉಭಯ ದೇಶಗಳ ನಡುವಿನ ಹೊಸ ಸ್ವಯಂಚಾಲಿತ ಮಾಹಿತಿ ವಿನಿಮಯದ ಚೌಕಟ್ಟಿನಡಿಯಲ್ಲಿ ಸ್ವಿಟ್ಜರ್ಲೆಂಡ್ ಭಾರತಕ್ಕೆ ಈ ಮಾಹಿತಿ ಹಸ್ತಾಂತರ ಮಾಡಿದ್ದು, ಭಾರತದ ಜತೆ 75 ದೇಶಗಳ ಸ್ವಿಸ್ ಖಾತೆ ಮಾಹಿತಿಯನ್ನು ಸ್ವಿಟ್ಜರ್ಲೆಂಡ್​ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಶನ್ (FTA) ಖಾತೆಯ ಬಗ್ಗೆ ಮಾಹಿತಿ ನೀಡಿದೆ. ಹೊರಬಿದ್ದಿರುವ ಮಾಹಿತಿ ಪ್ರಕಾರ ಸುಮಾರು 3.1 ಮಿಲಿಯನ್ ಹಣಕಾಸು ಖಾತೆಗಳು ಇದ್ದು, ಇದರಲ್ಲಿ ಸುಮಾರು 2.1 ಮಿಲಿಯನ್ ಖಾತೆಗಳ ಬಗ್ಗೆ ಮಾಹಿತಿ ನೀಡಿದೆ. ಹಣಕಾಸಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದರಲ್ಲಿ ಹೆಸರು, ವಿಳಾಸ, ದೇಶ, ರಾಜ್ಯ, ತೆರಿಗೆಯ ಬಗ್ಗೆ ಪೂರ್ಣ ಮಾಹಿತಿ ನೀಡಿದೆ. ಜೊತೆಗೆ ಉಳಿತಾಯದ ಹಣ ಮತ್ತು ಆದಾಯದ ಬಗ್ಗೆ ತಿಳಿಸಿದೆ. ಹಣಕಾಸು ಖಾತೆಗಳ ಮಾಹಿತಿ ಮತ್ತು 2018 ರಲ್ಲಿ ಮುಚ್ಚಲ್ಪಟ್ಟ ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತದೆ. ಮುಂದಿನ ವಿನಿಮಯವು ಸೆಪ್ಟೆಂಬರ್ 2020 ರಲ್ಲಿ ನಡೆಯಲಿದೆ ಎಂದು FTA ವಕ್ತಾರರು ತಿಳಿಸಿದ್ದಾರೆ. ಬ್ಲಾಕ್​ ಮನಿ ಇಟ್ಟವರ ಮೊದಲ ಪಟ್ಟಿ ರಿಲೀಸ್​ ಆಗುತ್ತಿದ್ದಂತೆ ರಾಜಕಾರಣಿಗಳು ಹಾಗೂ ಕಾಳಧನಿಕರ ಎದೆಯಲ್ಲಿ ಢವಢವ ಶುರುವಾಗಿದೆ. ಭಾರತದೊಂದಿಗೆ ಹಂಚಿಕೊಂಡಿರುವ ಮಾಹಿತಿ ಅತ್ಯಂತ ಗೌಪ್ಯವಾಗಿದ್ದು, ಯಾವುದೇ ಕಾರಣಕ್ಕೂ ಈ ಹೆಸರು ಬಹಿರಂಗಗೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا