Urdu   /   English   /   Nawayathi

ಪರಿಸ್ಥಿತಿ ಅನುಕೂಲವಾದರೆ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುತ್ತೇವೆ: ಅಮಿತ್ ಶಾ

share with us

ಜಮ್ಮು: 07 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಶಾಶ್ವತವಾಗಿರುವುದಿಲ್ಲ ಅನುಕೂಲಕರ ಪರಿಸ್ಥಿತಿ ಒದಗಿ ಬಂದ ನಂತರ ಅದು ತನ್ನ ರಾಜ್ಯ ಸ್ಥಾನಮಾನವನ್ನು ಮರಳಿ ಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. "ಜಮ್ಮು ಮತ್ತು ಕಾಶ್ಮೀರ ಶಾಶ್ವತವಾಗಿ ಕೇಂದ್ರಾಡಳಿತ ಪ್ರದೇಶವಾಗಿರುವುದಿಲ್ಲ. ಪರಿಸ್ಥಿತಿ ಸಾಮಾನ್ಯವಾದ ನಂತರ ರಾಜ್ಯತ್ವವನ್ನು ಹಿಂದಿರುಗಿಸಲಾಗುತ್ತದೆ" ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಅಧಿಕೃತ ಹೇಳಿಕೆಯಲ್ಲಿ ಶಾ ಅವರನ್ನು ಉಲ್ಲೇಖಿಸಿ ಹೇಳಲಾಗಿದೆ. ಇದೇ ವೇಳೆ 370ನೇ ವಿಧಿ ಕಾಶ್ಮೀರಿ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಿದೆ ಎಂಬ ಕಲ್ಪನೆ ತಪ್ಪು ಎಂದು ಗೃಹ ಸಚಿವರು ಹೇಳಿದರು. ಎಲ್ಲಾ ಪ್ರಾದೇಶಿಕ ವೈಶಿಷ್ಟ್ಯತೆಗಳು  ಭಾರತೀಯ ಸಂವಿಧಾನದಿಂದ ಅಂತರ್ಗತವಾಗಿ ರಕ್ಷಿಸಲ್ಪಟ್ಟಿವೆ ಎಂದು ಪ್ರತಿಪಾದಿಸಿದ ಶಾ 370ನೇ  ವಿಧಿಯ ದುರುಪಯೋಗಗಡಿಯಾಚೆಗಿನ ಭಯೋತ್ಪಾದನೆಗೆ ಮೂಲ ಕಾರಣ ಎಂದು ಹೇಳಿದ್ದಾರೆ. ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 2018 ರ ಬ್ಯಾಚ್‌ನ ಪ್ರೊಬೆಷನರ್‌ಗಳನ್ನು ಭೇಟಿಯಾಗಿ ಸಂವಹನ ನಡೆಸಿದ ಶಾರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ), 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಅವರೊಡನೆ ಚರ್ಚಿಸಿದ್ದಾರೆ. ಈ ವೇಳೆ ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲದೆ ಉತ್ತಮ ಆಡಳಿತಕ್ಕೂ ಎನ್‌ಆರ್‌ಸಿ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು. ಎನ್‌ಆರ್‌ಸಿ ಯನ್ನು ರಾಜಕೀಯ ವ್ಯಾಪಾರವಾಗಿ ನೋಡಬಾರದು ಏಕೆಂದರೆ ಅಭಿವೃದ್ಧಿಯ ಪ್ರಯೋಜನಗಳು ನಮ್ಮ ಎಲ್ಲ ನಾಗರಿಕರಿಗೆ ತಲುಪುವಂತೆ ನೋಡಿಕೊಳ್ಳಲು ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಹೊಂದಿರುವುದು ಬಹಳ ಮುಖ್ಯ. ಎಂಬುದಾಗಿ ಶಾ ಹೇಳಿದ್ದಾರೆ. ಯುವ ಪ್ರೊಬೇಷನರ್ ಗಳಿಗೆ ಶಾ  ಪ್ರಾಮಾಣಿಕ ಕಾರ್ಯಕ್ಷಮತೆಯತ್ತ ಗಮನ ಹರಿಸುವಂತೆ ಹೇಳಿದ್ದಲ್ಲದೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ಕಾನೂನು ಸುವ್ಯವಸ್ಥೆ ನಿರ್ವಹಣೆ ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا