Urdu   /   English   /   Nawayathi

ಬೈಕ್​ ಮೇಲೆ ಬಂದು ಬಾಂಬ್​ ಸ್ಫೋಟ... ಮಗು ಸೇರಿ 10 ಮಂದಿ ದುರ್ಮರಣ!

share with us

ಕಾಬೂಲ್​: 07 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮೋಟರ್ ​ಸೈಕಲ್​ ಮೇಲೆ ಬಂದ ವ್ಯಕ್ತಿಯೊಬ್ಬ ಬಾಂಬ್​ ಬ್ಲಾಸ್ಟ್​ ಮಾಡಿರುವ ಕಾರಣ, ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಇದರಲ್ಲಿ ಒಬ್ಬ ಮಗು ಸೇರಿದೆ. ಉಳಿದಂತೆ 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಭರದ ಕಾರ್ಯಾಚರಣೆ ನಡೆಸಿ, ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಿದ್ದಾರೆ. ಘಟನೆ ನಡೆದ ಕೆಲ ದೂರದಲ್ಲಿ ಅಫ್ಘಾನ್​ ಆರ್ಮಿ ಬಸ್​​ವೊಂದು ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ಹಿಂದೆ ಉಗ್ರರ ಕೈವಾಡವಿರುವುದು ಮೆಲ್ನೋಟಕ್ಕೆ ಸಾಬೀತುಗೊಂಡಿದೆ. ಆದರೆ ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆ ಇದರ ಹೊಣೆ ಹೊತ್ತುಕೊಂಡಿಲ್ಲ. ಘಟನೆಗೆ ಅಲ್ಲಿನ ಗವರ್ನರ್​ ತೀವ್ರ ಸಂತಾಸ ವ್ಯಕ್ತಪಡಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا