Urdu   /   English   /   Nawayathi

2 ತಿಂಗಳ ಗೃಹ ಬಂಧನ ನಂತರ ಸಾರ್ವಜನಿಕರಿಗೆ ಫಾರೂಕ್ ಅಬ್ದುಲ್ಲಾ ದರ್ಶನ; ನ್ಯಾಷನಲ್ ಕಾನ್ಫರೆನ್ಸ್ ನಿಯೋಗ ಭೇಟಿ

share with us

ಶ್ರೀನಗರ: 06 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರನ್ನು ಮತ್ತು ಅವರ ಪತ್ನಿ ಮೊಲ್ಲಿಯವರನ್ನು ಶ್ರೀನಗರದಲ್ಲಿ ಭಾನುವಾರ ಅವರ ನಿವಾಸದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಹಸ್ನೈನ್ ಮಸೂದಿ ಮತ್ತು ಅಕ್ಬರ್ ಲೊನೆ ಭೇಟಿ ಮಾಡಿದರು. ನಿನ್ನೆ ಜಮ್ಮು ಜಿಲ್ಲಾಡಳಿತ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿತ್ತು. ಇದರಿಂದಾಗಿ ಜಮ್ಮುವಿನಿಂದ ಪಕ್ಷದ ನಿಯೋಗ ಹೊರಟು ಇಂದು ಫಾರೂಕ್ ಮತ್ತು ಅವರ ಪುತ್ರ ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದರು. ನಿಯೋಗದಲ್ಲಿ ಪ್ರಾಂತೀಯ ಅಧ್ಯಕ್ಷ ದೇವೇಂದರ್ ಸಿಂಗ್ ರಾಣಾ ಮತ್ತು ಪಕ್ಷದ ಮಾಜಿ ಶಾಸಕರುಗಳು ಇಂದು ಬೆಳಗ್ಗೆ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ಪಕ್ಷದ ವಕ್ತಾರ ಮದನ್ ಮಂಟೂ ತಿಳಿಸಿದ್ದಾರೆ. ಭೇಟಿಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಂದ ಅನುಮತಿ ಪಡೆದಿದ್ದರು. 81 ವರ್ಷದ ಫಾರೂಕ್ ಅಬ್ದುಲ್ಲಾ ಅವರನ್ನು ಪಿಎಸ್ಎಯಡಿ ಶ್ರೀನಗರದಲ್ಲಿ ಗೃಹ ಬಂಧನದಲ್ಲಿರಿಸಲಾಗಿದ್ದು ಅವರ ಪುತ್ರ ಒಮರ್ ನನ್ನು ರಾಜ್ಯ ಅತಿಥಿಗೃಹದಲ್ಲಿ ವಶದಲ್ಲಿಡಲಾಗಿದೆ. ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಜಮ್ಮು-ಕಾಶ್ಮೀರದ ಪ್ರಮುಖ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಮಾಜಿ ಸಿಎಂ ಮೆಹಬೂಬ ಮುಫ್ತಿ ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಲೊನೆ ಕೂಡ ಗೃಹ ಬಂಧನದಲ್ಲಿದ್ದಾರೆ. 

ANI@ANI

National Conference (NC) leaders Hasnain Masoodi and Akbar Lone meet former J&K CM Farooq Abdullah and his wife Molly Abdullah at their residence in Srinagar

Embedded video

368

12:41 PM - Oct 6, 2019

Twitter Ads info and privacy

143 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا