Urdu   /   English   /   Nawayathi

ಪತ್ನಿಯ ಲವರ್ ವಿರುದ್ಧ ಮೊಕದ್ದಮೆ ದಾಖಲಿಸಿ 5.3 ಕೋಟಿ ಹಣ ಪಡೆದ ಅಮೆರಿಕಾ ಪ್ರಜೆ!

share with us

ವಾಷಿಂಗ್ಟನ್: 05 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಸಹೋದ್ಯೋಗಿಯೊಂದಿಗೆ ಪ್ರೇಮಪಾಶಕ್ಕೆ ಸಿಲುಕಿದ ಪತ್ನಿ12 ವರ್ಷದ ದಾಂಪತ್ಯ ಜೀವನ ಮುರಿದುಕೊಂಡಾಗ ಜೀವನ ಮುಗಿಯಿತು ಎಂದುಕೊಂಡಿದ್ದ ಅಮೆರಿಕಾದ ಪ್ರಜೆ ಕೆವಿನ್ ಹೊವಾರ್ಡ್ಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ವೈವಾಹಿಕ ಜೀವನ ವೈಫಲ್ಯಕ್ಕೆ ಕಾರಣ ಎಂದು ದೂಷಿಸಲಾದ ವ್ಯಕ್ತಿಯಿಂದ ಹೊವಾರ್ಡ್ಗೆ $ 750, 000 ಡಾಲರ್ ನೀಡುವಂತೆ ಉತ್ತರ ಕಾರೊಲಿನಾ ನ್ಯಾಯಾಧೀಶರು ಆದೇಶಿಸಿರುವುದಾಗಿ ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ. ನಾನು ಹೆಚ್ಚು ಕೆಲಸ ಮಾಡುತ್ತೇನೆ,ಅವಳಿಗೆ ಹೆಚ್ಚಿನ ಸಮಯ ನೀಡದ ಕಾರಣ ವಿಚ್ಚೇದನ ನೀಡುತ್ತಿರುವುದಾಗಿ ಆಕೆ ಹೇಳಿರುವುದಾಗಿ ಹೊವಾರ್ಡ್ ಸ್ಥಳೀಯ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.ಆದರೆ, ಆತನ ಹೆಂಡತಿ ತನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಮುಂಚಿನಿಂದಲೂ ಪರಸ್ಪರ ಭೇಟಿಯಾಗುತ್ತಿದ್ದರು ಎಂಬುದು ತಿಳಿದುಬಂದಿದೆ. ಆತ ಮನೆಗೂ ಬರುತ್ತಿದ್ದ, ಜೊತೆಯಲ್ಲಿಯೇ ಊಟ ಮಾಡುತ್ತಿದ್ದ, ಕಥೆಗಳನ್ನು ಹಂಚಿಕೊಳ್ಳುತ್ತಿದ್ದೇವು, ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದೇವೆ ಎಂಬುದಾಗಿ ಹೊವಾರ್ಡ್ ಹೇಳಿಕೊಂಡಿದ್ದಾರೆ. ನಂತರ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಗ್ರೀನ್ ವಿಲ್ಲೆ ನ್ಯಾಯಾಧೀಶರ ಮುಂದೆ 1800ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಯುಗದಲ್ಲಿ ಹೆಂಡತಿಯರನ್ನು ತಮ್ಮ ಗಂಡನ ಆಸ್ತಿಯೆಂದು ಪರಿಗಣಿಸಲಾಯಿತು ಎಂದು ತಿಳಿಸಿದ್ದಾರೆ. ಅಮೆರಿಕಾದ ಹವಾಯಿ, ಮಿಸ್ಸಿಸ್ಸಿಪ್ಪಿ, ನ್ಯೂ ಮೆಕ್ಸಿಕೊ, ದಕ್ಷಿಣ ಡಕೋಟಾ ಮತ್ತು ಉತಾಹ್ ದಲ್ಲಿ ಈಗಲೂ ಕಾನೂನು ಪರಿಣಾಮಕಾರಿಯಿಂದ ಕೂಡಿವೆ. ಉತ್ತರ ಕೆರೊಲಿನಾದ ವಾವೊನೀಸ್ ಕಾನೂನು ಸಂಸ್ಥೆಯ ಪ್ರಕಾರ, "ತಪ್ಪಾಗಿ ಅಥವಾ ದುರುದ್ದೇಶಪೂರಿತ ಕೃತ್ಯಗಳಿಂದ" ತಮ್ಮ ವಿವಾಹದ ವೈಫಲ್ಯಕ್ಕೆ ಕಾರಣವೆಂದು ಅವರು ನಂಬಿರುವ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡಲು ದಂಪತಿಗಳಲ್ಲಿ ಒಬ್ಬರಿಗೆ ಅವಕಾಶವಿದೆ. ಮದುವೆ ಪಾವಿತ್ರ್ಯವು ಮುಖ್ಯವಾಗಿದ್ದು, ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.ವಿಶೇಷವಾಗಿ ಈ ಯುಗದಲ್ಲಿ ನೈತಿಕತೆಯನ್ನು, ಹೊಣೆಗಾರಿಕೆಯನ್ನು ಪ್ರಶ್ನಿಸುತ್ತಾರೆ ಹಾಗಾಗೀ ಪ್ರಕರಣ ದಾಖಲಿಸಿದ್ದಾಗಿ ಹೊವಾರ್ಡ್ ತಿಳಿಸಿದ್ದಾರೆ. ಹೊವಾರ್ಡ್ ಪರ ವಕೀಲರು ಈ ಹಿಂದೆ 2010ರಲ್ಲಿ ಇಂತಹದ್ದೇ ಒಂದು  ಪ್ರಕರಣದಲ್ಲಿ ಬೇರೊಬ್ಬ ಕಕ್ಷಿದಾರರಿಗೆ 5.9 ಮಿಲಿಯನ್ ಡಾಲರ್ ನಷ್ಟು ಪರಿಹಾರ ಕೊಡಿಸಿದ್ದರು ಎಂಬುದುನ್ನು ಅವರು ನೆನಪಿಸಿಕೊಂಡಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا