Urdu   /   English   /   Nawayathi

ಪಕ್ಷ ಬಿಟ್ಟವರು, ಬೇರೆ ಪಾರ್ಟಿ ತೊರೆದು ಬಂದವರನ್ನು ಸ್ವಾಗತಿಸಿ ಬಿಜೆಪಿ ಬಲಪಡಿಸುತ್ತೇವೆ: ಸಿಎಂ

share with us

ಬೆಂಗಳೂರು: 03 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಹಾಗೂ ಕಟೀಲ್ ಮೇಲಿದ್ದು, ಬೇರೆ ಪಕ್ಷ ತೊರೆದಿರುವವರನ್ನು ಸ್ವಾಗತಿಸಿ, ಬಿಜೆಪಿಯನ್ನು ಬಲಪಡಿಸಲಾಗುತ್ತದೆ. ಯಾರೊಬ್ಬರನ್ನು ಪಕ್ಷದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ರ ಭೇಟಿ ಬಳಿಕ ಮಾತನಾಡಿದ ಸಿಎಂ, ಇಂದು ಸಚಿವ ಸಂಪುಟ ಸಭೆ ಮುಗಿಸಿ ಮತ್ತೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಈಗಾಗಲೇ ಮನೆ ಕಟ್ಟಲು 1 ಲಕ್ಷ ರೂ., ದುರಸ್ತಿಗಾಗಿ 25 ಸಾವಿರ ಕೊಡಲಾಗಿದೆ. ರಸ್ತೆಗಳು, ಸೇತುವೆಗಳು ಹಾಳಾಗಿವೆ, ಅವುಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಬಿಡುಗಡೆ ಆಗಿದೆ ಎಂದರು. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್​​ನವರು ದೊಡ್ಡದಾಗಿ ಉಪಕಾರ ಮಾಡುವ ರೀತಿ ಮಾತನಾಡುತ್ತಿದ್ದಾರೆ. ಆಗ ಮೋದಿ ವಿದೇಶ ಪ್ರವಾಸದಲ್ಲಿದ್ದರು, ಈಗ ಮರಳಿದ್ದಾರೆ. ಸಭೆ ನಡೆಸಿ ಹಣ ಬಿಡುಗಡೆ ಮಾಡಲಿದ್ದಾರೆ. ಬೇರೆ ರಾಜ್ಯದವರಿಗೂ ಹಣ ಬಿಡುಗಡೆ ಮಾಡಿಲ್ಲ, ಹೀಗಾಗೀ ಗೊಂದಲ ಉಂಟು ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡಿಲ್ಲ. ಕಾಂಗ್ರೆಸ್-ಜೆಡಿಎಸ್​ನವರು ಮೋದಿ ಬಗ್ಗೆ ಟೀಕೆ ಮಾಡುವುದನ್ನು ಬಿಡಬೇಕು ಎಂದರು. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿಯಾಗಿದ್ದರು, ಅತಿವೃಷ್ಟಿ ಬಗ್ಗೆ ಕೇಂದ್ರದಿಂದ ಹಣವನ್ನು ಪಡೆಯುವ ಬಗ್ಗೆ ಮತ್ತು ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ನಾವು ಹೇಗೆ ಹೆಜ್ಜೆ ಇಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದೇವೆ ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا